ಕಲಬುರಗಿ: ಕೇಂದ್ರ ಸರ್ಕಾರ ದೇಶದ ಬಹುಜನರು ಬಳಸುವ ರೈಲುಗಳ ಪ್ರಯಾಣ ದರ ಏರಿಕೆ ಮಾಡಿ ತಾವು ಜನವಿರೋಧಿ ಎಂಬುದನ್ನು ಮತ್ತೆ ಸಾಬೀತು ಮಾಡಿದೆ ಎಂದು ಸೇಡಂ ಶಾಸಕರು ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ ಅವರು ಇತ್ತೀಚೆಗೆ ಕೇಂದ್ರ ಸರ್ಕಾರ ರೈಲು ಪ್ರಯಾಣದ ದರ ಏರಿಕೆ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ರೈತರಿಗೆ ಅನುಕೂಲಕರವಾಗಲಿ ಎಂದು ಹಾಲಿನ ದರ ಹೆಚ್ಚಳ ಮಾಡಿದಾಗ ರಾಜ್ಯ ಬಿಜೆಪಿ ನಾಯಕರು ಆಕಾಶವೇ ಕಳಚಿ ಬಿದ್ದ ರೀತಿ ವಿರೋಧಿಸಿದರು. ಈಗ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ದರ ಏರಿಕೆ ಮಾಡಿ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತಿದ್ದರೂ ಏನೂ ಆಗಿಲ್ಲ ಎಂಬಂತೆ ಬಿಜೆಪಿ ನಾಯಕರು ಮೌನವಾಗಿದ್ದಾರೆ.
ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲಗಳ ದರ ಗಗನಕ್ಕೆ ಏರಿಕೆಯಾಗಿದ್ದು, ಈಗ ರೈಲ್ವೆ ಟಿಕೆಟ್ ದರವೂ ಹೆಚ್ಚಾಗಿ ಜನ ಪರಿತಪಿಸುವಂತಾಗಿದೆ. ದೇಶದ ಜನರನ್ನು ಸಂಕಷ್ಟಕ್ಕೆ ನೂಕುವುದೆ ಬಿಜೆಪಿ ಸರ್ಕಾರದ ಕೆಲಸ. ಇಂತಹ ಜನವಿರೋಧಿ ನಡೆಯನ್ನು ಪಕ್ಷಗಳ ಹಂಗಿಲ್ಲದೆ ಎಲ್ಲಾ ನಾಯಕರು ಮತ್ತು ಸಾರ್ವಜನಿಕರು ಖಂಡಿಸಬೇಕು ಎಂದು ಅವರ ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




