ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಮೂವರು ಶಂಕಿತ ಉಗ್ರರನ್ನು ಎನ್.ಐ.ಎ ಅಧಿಕಾರಿಗಳ ತಂಡ ಅರೆಸ್ಟ್ ಮಾಡಿದೆ.ಬೆಂಗಳೂರು ಮತ್ತು ಕೋಲಾರದಲ್ಲಿ ಏಕ ಕಾಲಕ್ಕೆ ದಾಳಿ ಮಾಡಿರುವ ಎನ್.ಐ.ಎ ಟೀಮ್ ಮೂವರನ್ನಿ ಬಂಧಿಸಿದೆ.
ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಮನೋ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾಕ್ಟರ್ ನಾಗರಾಜ್ ಮತ್ತು ASI ಚಾಂದ್ ಪಾಷಾ ಅನೀಸ್ ಹಾಗೂ ಉಗ್ರ ನಾಸೀರ್ ತಾಯಿ ಫಾತಿಮಾರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಈಗಾಗಲೇ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೈಲಿನಲ್ಲಿರುವ ಉಗ್ರ ನಾಸೀರ್ ಗೆ ಸಹಕಾರ ನೀಡಿದ ಆರೋಪದಲ್ಲಿ ಈ ಮೂವರನ್ನೂ ಬಂಧಿಸಲಾಗಿದೆ.
ಬೆಂಗಳೂರಿನ ಸರಣಿ ಬಾಂಬ್ ಸ್ಪೋಟದ ರೂವಾರಿ ,ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ನಾಸೀರ್ ಗೆ ಮೊಬೈಲ್ ಪೂರೈಕೆ ಮಾಡಿರುವ ಆರೋಪ,ಸೇರಿದಂತೆ ಹಲವು ರೀತಿ ಸಹಕಾರ ತೋರಿರುವುದು ಎನ್.ಐ.ಎ ಗಮನಕ್ಕೆ ಬಂದಿದ್ದು,ಈ ದಾಳಿಯ ವೇಳೆ ಶಂಕಿತ ಉಗ್ರರಿಂದ ಸಂಪರ್ಕ ಸಾಧಿಸಲು ಬಳಸುತ್ತಿದ್ದ ಎರಡು ವಾಕಿಟಾಕಿಗಳು ಮತ್ತು ಕೆಲವು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.




