ಚಿಕ್ಕೋಡಿ : ತಾಲ್ಲೂಕಿನ ಸಿದ್ದಾಪೂರವಾಡಿ ಗ್ರಾಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಶುಕ್ರವಾರ ಭೇಟಿ ನೀಡಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆ ನಿವಾರಣೆಯ ಕುರಿತು ಚರ್ಚಿಸಿದರು.
ಸಿದ್ದಪುರವಾಡಿ ಗ್ರಾಮದಲ್ಲಿ ಭೀಮ ಘರ್ಜನೆ ಸಂಘಟನೆ ಅಧ್ಯಕ್ಷರಾದ ಶ್ರೀ ಯುವರಾಜ್ ಕಾಂಬಳೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ನಾಗಲಕ್ಷ್ಮೀ ಚೌಧರಿ ಇವರು “ದಲಿತ ಮಹಿಳೆಯರು, ಯುವಕರು, ಮಕ್ಕಳು ಶಿಕ್ಷಣವನ್ನು ಪಡೆದುಕೊಂಡು ಹೋರಾಟದ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಗುಲಾಮರಾಗಿ ಬಾಳಬಾರದು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವವರಿಗೆ ತಮ್ಮ ಮತ ಹಾಕಬೇಕು. ಮತವನ್ನು ಯಾರೂ ಮಾರಿಕೊಳ್ಳಬಾರದು” ಎಂದು ಕಿವಿಮಾತು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ದೊರೆಯುವ ಸರ್ಕಾರಿ ಯೋಜನೆಗಳನ್ನು ಅವರ ಮನೆಗೆ ತಲುಪಿಸುವಂತೆ ಚಿಕ್ಕೋಡಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರ್ಚನಾ ಸಾಣೆ ಅವರಿಗೆ ಸೂಚಿಸಿದರು.
ಮಹಿಳಾ ದೌರ್ಜನ್ಯ ತಡೆಯಲು ಶಿಶು ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ನೀಡುವ ಅವರ ಸ್ವಾವಲಂಬಿ ಬದುಕಿಗೆ ಅಧಿಕಾರಿಗಳು ಆಸರೆಯಾಗಬೇಕು ಎಂದು ಹೇಳಿದರು.
ಕಳೆದ ಒಂದು ವರ್ಷದಿಂದ ಮನರೇಗಾ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಾಯಕ ಮಿತ್ರರಿಗೆ ಸಂಬಳ ಇಲ್ಲದ್ದರ ಕುರಿತು ಸಾರ್ವಜನಿಕರ ಪ್ರಶ್ನೆಗೆ ಉಪ ವಿಭಾಗಾಧಿಕಾರಿ ಯಾದ ಶ್ರಿ ಸುಭಾಷ ಸಂಪತಾಂವಿ ಇವರು ಉತ್ತರಿಸಿ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಗೌರವ ಧನ ಬಿಡುಗಡೆ ಮಾಡುವ ಭರವಸೆ ನೀಡಿದರು.
ಚಿಕ್ಕೋಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್ ಇಲ್ಲದ್ದರ ಕುರಿತು ಹಾಗೂ ಸೀಜರಿನ್ ಆಗಿರುವ ತಾಯಿಯ ಸಂಬಂಧಿಕರಿಂದ ಪ್ರತಿಯೊಂದು ಹೆರಿಗೆಗೆ ₹ 6 ರಿಂದ 10 ಸಾವಿರ ಹಣವನ್ನು ವೈದ್ಯರು ಹಾಗೂ ಸಿಬ್ಬಂದಿ ಪಡೆದುಕೊಳ್ಳುತ್ತಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ನ್ಉತ್ತರಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಬಾಗಾಯಿ, “ಕೂಡಲೇ ಈ ಕುರಿತು ತನಿಖೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಇಂತಹ ಪ್ರಮಾದಗಳು ಆಗದಂತೆ ನಿಗಾ ವಹಿಸುವುದಾಗಿ ಹೇಳಿದರು.
ಸಭೆಯಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ಚಿದಂಬರ ಕುಲಕರ್ಣಿ, ಡಿಡಿಪಿಐ ಆರ್ ಎಸ್ ಸೀತಾರಾಮು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ, ಟಿಎಚ್‍ಒ ಡಾ. ಸುಕುಮಾರ ಬಾಗಾಯಿ, ಭೀಮ ಘರ್ಜನೆ ಸಂಘಟನೆಯ ಯುವರಾಜ ಕಾಂಬಳೆ, ಬಂತೇಜಿ ಮುಂತಾದವರು ಇದ್ದರು.
ಚಿಕ್ಕೋಡಿ ತಾಲ್ಲೂಕಿನ ಸಿದ್ದಾಪೂರವಾಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಾರ್ವಜನಿಕರ ಕುಂದುಕೊರತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಭೀಮ ಘರ್ಜನೆ ಸಂಘಟನೆ ಎಲ್ಲ ಕಾರ್ಯಕರ್ತರು ಹಾಗೂ ಸದಸ್ಯರು ಉಪಸಧರಿದ್ದರು.
ವರದಿ : ರಾಜು ಮುಂಡೆ




