ದಕ್ಷಿಣ ಕನ್ನಡ : ಸರ್ಕಾರ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ಮುಂದಾಗಿದೆ. ಉದ್ಯೋಗ ನಿರೀಕ್ಷೆಯಲ್ಲಿರೋ ಆಕಾoಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
545 ಪಿಎಎಸ್ಐಗಳಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಉಳಿದ 402 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಶುಭಸುದ್ದಿ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು,402 ಪಿಎಎಸ್ಐ ಹುದ್ದೆಗಳ ನೇಮಕಾತಿಯನ್ನು ಶೀಘ್ರವೇ ಮಾಡ್ತೇವೆ. ಅಲ್ಲದೆ 10-15 ಸಾವಿರ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ನಾವು ತಕ್ಷಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆಯಾಗಿದೆ. ಕಾನೂನನ್ನು ಬಹಳ ಕಠಿಣವಾಗಿ ಜಾರಿಗೊಳಿಸಿದ ಕಾರಣ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಂತಿ ನೆಲಸಲು ಸಕಲ ಕ್ರಮ ಕೈಗೊಂಡಿರೋದಾಗಿ ಹೇಳಿದ್ದಾರೆ.




