ಚಿಟಗುಪ್ಪ:ಸರ್ಕಾರಿ ಆಸ್ಪತ್ರೆಗಳನ್ನು ಕಂಡ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಸೇವೆ ಒದಗಿಸುತ್ತಿದೆ.
ಈ ಆಸ್ಪತೆಯಲ್ಲಿ ಅಂಬುಲೆನ್ಸ್ ಸೇವೆ ಹಾಗೂ ನಾಯಿ ,ಹಾವು ಕಡಿತದ ಚುಕ್ಕುಮದ್ದು ಸೇರಿದಂತೆ ಕ್ಷಯರೋಗ ,ಮಲೇರಿಯಾ , ಶುಗರ್ ,ಬಿಪಿ ರೋಗಗಳಿಗೆ ಇಲ್ಲಿಯ ವೈದ್ಯರು ಉತ್ತಮವಾಗಿ ತಪಾಸಣೆ ನಡೆಸಿ ಅಗತ್ಯ ಔಷಧಿ ನೀಡುತ್ತಿದ್ದಾರೆ.
ಈ ನಿರ್ಣಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿರ್ಣಾ,ನಿರ್ಣಾ ವಾಡಿ,ಮುತ್ತಂಗಿ ,ಮುಸ್ತರಿ, ಗೋವಿಂದ್ ತಾಂಡ, ಸೇವಾಲಾಲ್ ತಾಂಡ, ಭಾದ್ಲಾಪೂರ್,ಮೋಕಿನ್ ತಾಂಡ,ಮುಸ್ತರಿ ವಾಡಿ, ಉಡಬಾಳ ವಾಡಿ,ಉಡಬಾಳ ಸೇರಿದಂತೆ ಒಟ್ಟು 12 ಗ್ರಾಮಗಳು ಬರುತ್ತವೆ.
ನಿತ್ಯವೂ ಸುಮಾರು 120ಕ್ಕು ಹೆಚ್ಚು ಒಪಿಡಿ ರೋಗಿಗಳು ಸೇರಿದಂತೆ ಗರ್ಭಿಣಿಯರು , ಕಾಮಣಿ,ಚರ್ಮ ಸಮಸ್ಯೆಯ ರೋಗಿಗಳು ಸಹ ಬಂದು ಚಿಕಿತ್ಸೆ ಪಡೆಯುತ್ತಾರೆ ಎಂದು ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಹೈದರ್ ಅಲಿ ಖಾನ್ ತಿಳಿಸಿಸಿದ್ದಾರೆ.
ವರದಿ:ಸಜೀಶ ಲಂಬುನೋರ




