ಅಧ್ಯಯನ ಸಾಧನೆಗೆ ಸಹಕಾರಿ
ಭಾಲ್ಕಿ : ನಿರಂತರ ಓದು, ಅಧ್ಯಯನ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗಲಿದೆ ಎಂದು ಶಿಕ್ಷಕ ಬಸವರಾಜ ಪ್ರಭಾ ಹೇಳಿದರು. ಪಟ್ಟಣದ ಲೆಕ್ಚರರ ಕಾಲೋನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮವಸ್ತ್ರ ಎಲ್ಲರೂ ಸಮಾನರೆಂಬ ಭಾವ ಮೂಡಿಸುತ್ತದೆ. ವಿದ್ಯಾರ್ಥಿಗಳು ಸಮವಸ್ತç ಧರಿಸುವುದರಿಂದ ಮೇಲು-ಕೀಳು ಎನ್ನುವ ಭಾವ ಬರುವುದಿಲ್ಲ. ಸಮವಸ್ತç ಶಿಸ್ತಿನ ಸಂಕೇತವೂ ಹೌದು ಎಂದರು.
ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಅಥರ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶೃತಿ ಬಿರಾದಾರ್ ಮಾತನಾಡಿ, ಸಮವಸ್ತ್ರ ಸಮಾನತೆಯ ಸಂಕೇತವಾಗಿದೆ. ಇದರಿಂದ ಕಿರಿಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸಮಾನತೆಯ ಗುಣಗಳನ್ನು ಬೆಳೆಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಮುಖ್ಯಗುರು ಆನಂದ ಕಲ್ಯಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಇಳಕಲ್ ಸಾರಿ ಸೆಂಟರ್‌ನ ಮಾಲೀಕ ವಿಜಯಕುಮಾರ ಸಜ್ಜನ್, ಶಿಕ್ಷಕರಾದ ಜಯಪ್ರಕಾಶ ಸಹಾನೆ, ಅಂಜಲಿ ಜೋಶಿ, ಶುಭಂ ರಾಯವಾಡ ಇದ್ದರು. ಪ್ರಕಾಶ ರುದನೂರೆ ಸ್ವಾಗತಿಸಿದರು. ಉದಯಕುಮಾರ ಜೋಶಿ ನಿರೂಪಿಸಿದರು. ದಿಲೀಪ ಘಂಟೆ ವಂದಿಸಿದರು.
ವರದಿ:ಸಂತೋಷ ಬಿಜಿ ಪಾಟೀಲ




