ತುಮಕೂರು : ಜಿ.ಎಸ್.ಟಿ. ತೆರಿಗೆ ಪಾವತಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ತುಮಕೂರು ಹಾಲು ಒಕ್ಕೂಟಕ್ಕೆ (ತುಮುಲ್) ತೆರಿಗೆ ಇಲಾಖೆಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ಇಂದು ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಪಾವಗಡ ಕ್ಷೇತ್ರದ ಶಾಸಕ ಹೆಚ್.ವಿ.ವೆಂಕಟೇಶ್ ತೆರಿಗೆ ಇಲಾಖೆ ಒಕ್ಕೂಟಕ್ಕೆ ನೀಡಿದ ಪ್ರಶಂಸನಾ ಪತ್ರವನ್ನು ಪ್ರದರ್ಶಿಸಿ ಸಂಸ್ಥೆಯ ಆಡಳಿತದ ಬಗ್ಗೆ, ಪ್ರಶಂಸನಾ ಪತ್ರ ಬಂದಿರುವ ಬಗ್ಗೆ ತಿಳಿಸಿ ಎಲ್ಲರೊಡಗೂಡಿ ಸಂತಸಪಟ್ಟರು.
ಈ ವೇಳೆ ತುಮುಲ್ ನಿರ್ದೇಶಕರಾದ ಭಾರತಿ ದೇವಿ, ಚಂದ್ರಶೇಖರ್ ರೆಡ್ಡಿ, ನಾಗೇಶ್ ಬಾಬು, ಮಹಾಲಿಂಗಯ್ಯ, ಡಿ. ಕೃಷ್ಣಕುಮಾರ್, ಎಸ್.ಆರ್.ಗೌಡ, ಎಂ.ಕೆ.ಪ್ರಕಾಶ್, ನಂಜೇಗೌಡ, ಸಿದ್ದಗಂಗಯ್ಯ, ಶಿವಪ್ರಕಾಶ್ ಮತ್ತು ಒಕ್ಕೂಟ ಎಂ.ಡಿ. ಶ್ರೀನಿವಾಸನ್ ಸಭೆಯಲ್ಲಿ ಇದ್ದರು.
ವರದಿ: ಗಿರೀಶ್ ಕೆ ಭಟ್




