ಬೆಳಗಾವಿ: ಶಾಲಾ-ಕಾಲೇಜುಗಳ ಆಡಳಿತಾತ್ಮಕ ಹಿತ ದೃಷ್ಠಿಯಲ್ಲಿ ಹೆಚ್ಚುತ್ತಿರುವ ಕಾರ್ಯಾಭಾರವನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹಾಗೂ ಕಾಲೇಜು ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಣ ಇಲಾಖೆಯ ವಿಭಾಗ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ನವರಿಗೆ ಸುವರ್ಣ ಸೌಧದಲ್ಲಿ ಸನ್ಮಾನಿಸಿ ಅವರಿಗೆ ಮನವಿ ಸಲ್ಲಿಸಿದರು.
ಮಕ್ಕಳ ಉಜ್ವಲ ಭವಿಷ್ಯದ ದೃಷ್ಠಿಯಿಂದ ಶಿಕ್ಷಕರನ್ನು ಹೆಚ್ಚು ಪಾಠ ಬೋಧನೆಗಳಿಗೆ ಸೀಮಿತಗೊಳಿಸಿ ಬಿಎಲ್‌ಓ ಕಾರ್ಯದಿಂದ ಮುಕ್ತಿಗೊಳಿಸಿ ಪರ್ಯಾಯ ವ್ಯವಸ್ಥೆಯನ್ನು ಕೈಗೂಂಡು ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳಾದ ಸಹ ಶಿಕ್ಷಕರಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ, ಹಾಗೂ ಮುಖ್ಯ ಶಿಕ್ಷಕರಿಂದ ಪದೋನ್ನತಿ ಪ್ರಧಾನ ಗುರುಗಳ ಬಡ್ತಿ ನೀಡಿ ಶಿಕ್ಷಕರ ಹೆಚ್ಚುವರಿ ಮಾಡುವುದು. ಮತ್ತು ಬಿಎ ಬಿ.ಎಡ್ ಪದವಿ ಪಡೆದ ಶಿಕ್ಷಕರನ್ನು ಪ್ರೌಢ ಶಾಲೆಗೆ ಬಡ್ತಿ ನೀಡುವುದು. ಸಿ & ಆರ್ ಸಮಸ್ಯೆ ಬಗೆಹರಿಯುವವರೆಗೆ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯನ್ನು ಈ ಕೂಡಲೆ ಕೈಗೊಳ್ಳುವುದು.
2016 ರ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 7 ನೇ ತರಗತಿ ಶಿಕ್ಷಕರೆಂದು ಪರಿಗಣಿಸಿ ಸೇವಾ ಮತ್ತು ಬಡ್ತಿ ಸೌಲಭ್ಯವನ್ನು ಕಲ್ಪಿಸುವುದು. ಪಿಎಸ್‌ಟಿ ಹಿಂದಿ ಶಿಕ್ಷಕರನ್ನು ಹೆಚ್ಚುವರಿಯಿಂದ ಕೈಬಿಡುವುದು.ಒಬ್ಬ ಶಿಕ್ಷಕರನ್ನು ತಮ್ಮ ಸೇವಾ ಅವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಹೆಚ್ಚುವರಿ ಎಂದು ಗುರುತಿಸುವುದು. ಮೂರನೇ ಬಾರಿ ಹೆಚ್ಚುವರಿ ಆದರೆ ವಿನಾಯತಿ ನೀಡುವುದು. ಹೆಚ್ಚುವರಿ ಶಿಕ್ಷಕರಿಗೆ ಖಾಲಿ ಇರುವ ಜಿಪಿಟಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡುವುದು. 200 ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಒಂದು ‘ ಎಸ್‌ಡಿಸಿ ಹುದ್ದೆಯನ್ನು ಹಾಗೂ ಡಿ ದರ್ಜೆ ಹುದ್ದೆಯನ್ನು ಮಂಜೂರು ಮಾಡುವುದು. ಹಾಗೂ ಈಸಿಓ ಹುದ್ದೆಗಳನ್ನು ತುಂಬುವಾಗ ಸೇವಾ ಜೇಷ್ಠತೆ ಆದಾರದ ಮೇಲೆ ತುಂಬಿಕೊಳ್ಳುವುದು.
ಪ್ರೌಢ ಶಾಲಾ ಶಿಕ್ಷಕರಿಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಬಡ್ತಿ ನೀಡುವಾಗ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡುವುದು. ಪದೋನ್ನತಿ ಪಡೆದ ಪ್ರೌಢ ಶಾಲಾ ಶಿಕ್ಷಕರಿಗೆ ಸ್ಥಗಿತಗೊಂಡ ವೇತನ ಬಡ್ತಿ ಮಂಜೂರು ಮಾಡುವುದು. ಬಡ್ತಿ ಹೊಂದಿದ ಶಿಕ್ಷಕ-ಶಿಕ್ಷಕಿಯರ ಸೇವಾ ದಿನಾಂಕ ಪರಿಗಣಿಸಿ ವೇಟೇಜ್ ನೀಡುವುದು ಮತ್ತು ಟೈಮ್ ಬಾಂಡ ಸೇರಿದಂತೆ ಇಂಕ್ರಿಮೇಂಟ್ ನೀಡುವುದರ ಜೊತೆಗೆ.ದೈಹಿಕ ಶಿಕ್ಷಕರ ಮುಂಬಡ್ತಿ ಸ್ತಗಿತವಾಗಿದ್ದು ಇದಕ್ಕೆ ಮರುಚಾಲನೆ ಕೊಡುವುದು.
ಪರೀಕ್ಷಾ ಕಾರ್ಯದ ಸಂಭಾವಣೆ ಒಂದು ವರ್ಷವಾದರು ಉಪನ್ಯಾಸಕರಿಗೆ ಸಂಭಾವಣೆ ಸಿಗುತ್ತಿಲ್ಲ ಅದನ್ನು ಪರೀಕ್ಷೆ ಮುಗಿದ ಒಂದು ತಿಂಗಳ ಒಳಗೆ ಪಾವತಿಸುವಂತೆ ಕ್ರಮ ಕೈಗೊಳ್ಳುವುದರೊಂದಿಗೆ ಕಾಲೇಜು ಉಪನ್ಯಾಸಕರಿಂದ ಪ್ರಾಚಾರ್ಯರ ಹುದ್ದೆಗೆ ಬಡ್ತಿ ನೀಡುವಾಗ ಯಾವುದೇ ಪರೀಕ್ಷೆ ಕೈಗೊಳ್ಳದೆ ಸೇವಾ ಜೇಷ್ಠತೆ ಆದಾರದ ಮೇಲೆ ಬಡ್ತಿ ನೀಡುವುದು. 2025-26 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕೋರಿಕೆಯ ವರ್ಗಾವಣೆಯಲ್ಲಿ ಕಡಿಮೆ ವಿದ್ಯಾರ್ಥಿಗಳ ದಾಖಲಾತಿಗೊಂಡಿರುವ ಕಾಲೇಜುಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಗಣಕೀಕೃತ ಕೌನ್ಸಿಲಿಂಗನಲ್ಲಿ ಉಪನ್ಯಾಸಕರು ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು. ಅನುದಾನಿತ ಪದವಿ ಪೂರ್ವ ಕಾಲೇಜುಗಳ 2006 ರ ನಂತರ ನೇಮಕವಾದ ಬಿ.ಎಡ್ ಪದವಿ ಹೊಂದಿರದ ಉಪನ್ಯಾಸಕರುಗಳಿಗೆ ವೇತನ ಸಹಿತವಾಗಿ ಬಿ.ಎಡ್ ಪದವಿ ಪುರೈಸಲು ಸರಕಾರದಿಂದ ಮಾರ್ಗಸೂಚಿ ಹೊರಡಿಸಿ 40ರ ಕಿಂತ್ ಕಡಿಮೆ ವಿಧ್ಯಾರ್ಥಿಗಳಿರುವ ಕಾಲೇಜುಗಳ ಖಾಲಿ ಹುದ್ದೆಗಳನ್ನು ವರ್ಗಾವಣೆಯಲ್ಲಿ ತೋರಿಸುವುದು. ಸೇರಿದಂತೆ ಹಲವಾರು ಬೇಡಿಕೆಗಳನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಪದಾಧಿಕಾರಿಗಳು ಮಾನ್ಯ ಸಚಿವರಿಗೆ ಮನವರಿಕೆ ಮಾಡಿದರು. ಸಚಿವರು ಸೂಕ್ತ ಕ್ರಮ ಕೈಗೂಳ್ಳತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ, ಕೋಶಾಧ್ಯಕ್ಷರಾದ.ಸೋಮಶೇಖರ ಹಲಸಗಿ, ಪ್ರಧಾನ ಕಾರ್ಯದರ್ಶಿಯಾದ ಆರ್ ಎಸ್ ಹಿರೇಗೌಡರ.ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ
ಸೇರಿದಂತೆ ಬೆಳಗಾವಿ, ಚಿಕ್ಕೋಡಿ, ಹಾಗೂ ಧಾರವಾಡ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಉಮೇಶ ಗೌರಿ




