ಲಿಂಗಸುಗೂರು : ಹಟ್ಟಿ ಚಿನ್ನದ ಗಣಿಯಲ್ಲಿ ಇಂದು ಎಐಟಿಯುಸಿ ಕಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಹಟ್ಟಿ ಪಾಮನಕಲ್ಲೂರು ಕ್ರಾಸಿನಿಂದ ಬೈಕ್ ರ್‍ಯಾಲಿ ಮೂಲಕ ಹಟ್ಟಿ ಪಟ್ಟಣದ ಮುಖ್ಯರಸ್ತೆಯೊಂದಿಗೆ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದವರಿಗೆ ಆಗಮಿಸಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ದೇಶದ ದುಡಿಯುವ ಕಾರ್ಮಿಕರ ನಾಲ್ಕು ಲೇಬರ್ ಕೋಡ್ ಜಾರಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ, ಇಡೀ ದೇಶ ವ್ಯಾಪ್ತಿ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕೆ ಕರೆ ನೀಡಿದ್ದು ಕೇಂದ್ರ ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಕಾರ್ಪೊರೇಟರ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಕಾಯಿದೆ,ಕೈಗಾರಿಕಾ ಬಾಂಧವ್ಯ, ಔದ್ಯೋಗಿಕ ಸುರಕ್ಷತೆ,ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಹಿತೆ, ಸಾಮಾಜಿಕ ಭದ್ರತೆ ಸಹಿತಿ ಸೇರಿದಂತೆ ಕಾನೂನು ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದವು
ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ಸಂಸತ್ ಭವನ ನವದೆಹಲಿ ಇವರಿಗೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಮುಖಾಂತರ ಮನವಿ ಪತ್ರವನ್ನು ಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಣ್ಣ ಇವರಿಗೆ ನೀಡಲಾಯಿತು
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಸಮಿತಿ ಕಾರ್ಯಧ್ಯಕ್ಷರು ಸಂಗಯ್ಯ ಸ್ವಾಮಿ, ಚಂದ್ರಶೇಖರ್, ತಿಪ್ಪಣ್ಣ ಮಾಚನೂರ್, ನಾಗರೆಡ್ಡಿ ಜೇರಬಂಡಿ, ಜೆ ಎಸ್ ಹನುಮಂತ, ಪೆಂಚಲಮ್ಮ, ನರಸಪ್ಪ ಬಾದರದಿನ್ನಿ, ಅಬ್ರಾಹಿಂ, ಸಲೀಂ ಪಾಶಾ, ಕನಕರಾಜ್ ಗುರಿಕಾರ, ರಂಗನಾಥ್, ಮರಿಯಪ್ಪ, ಮುನಿರುದ್ದೀನ್, ಬಾಬು, ಸೈಯದ್ ಯಾಸೀನ್, ಗಂಗಪ್ಪ ಶಾಕೋದಿ, ಅಮೀನ್ ಪಾಷಾ, ಕಿರಣ್ ಕುಲಕರ್ಣಿ , ಸುಮನ್, ಆರೋಗ್ಯಪ್ಪ, ಉಮಾಪತಿ, ಹನುಮಂತ್ರಾಯ, ಬಾಬು ಸಾಗರ್, ಶ್ರೀಕಾಂತ್, ರವಿ ಹುಣಸಿಗಿ, ಸಬ್ಜಲಿ ವಕೀಲರು, ಸೇರಿದಂತೆ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




