ಕಲಬುರಗಿ : ಕಲ್ಬುರ್ಗಿಯಲ್ಲಿ ಹೃದಯಘಾತಕ್ಕೆ ಕಾಲೇಜು ಉಪ ಪ್ರಾಂಶುಪಾಲರು ಒಬ್ಬರು ಸಾವನ್ನಪ್ಪಿದ್ದಾರೆ. ಕಲಬುರ್ಗಿಯ ಬಿದ್ದಾಪುರ ಕಾಲೋನಿಯ ಗುರುಬಸಯ್ಯ ಸಾಲಿಮಠ್ (53) ಎನ್ನುವವರು ಸಾವನಪ್ಪಿದ್ದಾರೆ.
ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಗುರುಬಸಯ್ಯ ಸೇವೆ ಸಲ್ಲಿಸುತ್ತಿದ್ದರು. ವಾಕಿಂಗ್ ಮುಗಿಸಿ ಮನೆಯಲ್ಲಿ ನೀರು ಕುಡಿದು ಕುಳಿತಿದ್ದಾಗ ತೀವ್ರ ಹೃದಯಾಘಾತ ಸಂಭವಿಸಿ ಸಾವನಪ್ಪಿದ್ದಾರೆ.
ನಿನ್ನೆ ಕಾಲೇಜಿನಲ್ಲಿದ್ದಾಗಲೇ ಗುರುಬಸಯ್ಯ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಅವರು ಯಾವುದೇ ಚಕಪ್ ಮಾಡಿಸಿಕೊಳ್ಳಲಿಲ್ಲ. ಆದರೆ ಇಂದು ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದು ನೀರು ಕುಡಿದು ಕುಳಿತುಕೊಂಡಾಗಲೇ ಏಕಾಏಕಿ ಹೃದಯಘಾತದಿಂದ ಸಾವನಪ್ಪಿದ್ದಾರೆ.




