—————————————————————ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯ
ಮ್ಯಾಂಚೆಸ್ಟರ್ ( ಇಂಗ್ಲೆಂಡ್): ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ವನಿತೆಯರ ಕ್ರಿಕೆಟ್ ತಂಡವು ಆತಿಥೇಯ ತಂಡದ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-20 ಪಂದ್ಯದಲ್ಲಿ 6 ವಿಕೆಟ್ ಗಳ ಜಯ ಸಾಧಿಸಿತು.

ಎಮಿರೆಟ್ಸ್ ಓಲಟ್ರೆಪಿಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಹಿಳೆಯರ ತಂಡವು 7 ವಿಕೆಟ್ ಗೆ 126 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಭಾರತ ವನಿತೆಯರು 17 ಓವರುಗಳಲ್ಲಿ 4 ವಿಕೆಟ್ ಗೆ 127 ರನ್ ಗಳಿಸಿ ಸುಲಭ ಜಯ ಸಾಧಿಸಿದರು. ಭಾರತದ ಪರವಾಗಿ ಶಫಾಲಿ ವರ್ಮಾ 19 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 31 ರನ್ ಗಳಿಸಿದರು.
ಸ್ಮೃತಿ ಮಂದಾನಾ 31 ಎಸೆತಗಳಲ್ಲಿ 32 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 5 ಬೌಂಡರಿಗಳು ಕೂಡ ಸೇರಿದ್ದವು. ನಾಐಕಿ ಹರಮನ್ ಪ್ರೀತ್ ಕೌರ್ 25 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 26 ರನ್ ಸೇರಿಸಿದರು. ಭಾರತದ ಪರವಾಗಿ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ ರಾಧಾ ಯಾದವ್ 15 ರನ್ ಗೆ 2 ವಿಕೆಟ್ ಪಡೆದು ಮಿಂಚಿದರಲ್ಲದೇ ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾದರು.




