ಹಾಸನ : ಅಸ್ತಿಗಾಗಿ ಹೆತ್ತಪ್ಪ ಹಾಗೂ ಸಹೋದರನನ್ನೇ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಘಟನೆ ನಡೆದಿದೆ.ತಂದೆ ದೇವೇಗೌಡ (70) ಹಾಗೂ ಸಹೋದರ ಮಂಜುನಾಥ್ (50) ಕೊಲೆಯಾದವರಾಗಿದ್ದಾರೆ.
ಮೋಹನ್ (47) ಕೊಲೆಗೈದ ಆರೋಪಿ, ಮಂಜುನಾಥ್ ಹಾಗೂ ಮೋಹನ್ ಇಬ್ಬರು ಅವಿವಾಹಿತರಾಗಿದ್ದರು.ಮಂಜುನಾಥ್,ತಂದೆ-ತಾಯಿಯೊಂದಿಗೆ ವಾಸವಿದ್ದರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಿದ್ದರು ಎನ್ನಲಾಗಿದೆ.
ಆಸ್ತಿ ಮಾರಾಟ ಮಾಡಿದ ಹಣ ನೀಡಿಲ್ಲ ಎಂದು ಮೋಹನ್ ಗಲಾಟೆ ಮಾಡಿದ್ದನು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇಬ್ಬರನ್ನು ಕೊಲೆ ಮಾಡಿದ್ದಾನೆ. ಅದೃಷ್ಟವಶಾತ್ ತಾಯಿ ಜಯಮ್ಮ ಬಚಾವ್ ಆಗಿದ್ದಾರೆ.
ಕೊಲೆ ಮಾಡಿ ಮನೆಯಲ್ಲೇ ಮಲಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.




