ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿರುವ ಯಳಂದೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ AEE, JE ಅವರಿಂದ ಕಮರವಾಡಿ ಗ್ರಾಮದ ಗುತ್ತಿಗೆದಾರ ಮಲ್ಲಿಕಾರ್ಜುನರವರಿಗೆ ಕಾಮಗಾರಿಯ ಬಿಲ್ ನೀಡದೆ ಸತಾಯಿಸುತ್ತಿದ್ದಾರೆ ಹಾಗೂ ಬಿಲ್ ಮಾಡಲು ಹಣವನ್ನು ಕೇಳುತ್ತಿದ್ದಾರೆ ಎಂದು ಆರೋಪ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿದೆ. ಆಗಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಗುತ್ತಿಗೆದಾರ ಮಲ್ಲಿಕಾರ್ಜುನ ತಮ್ಮ ಅಳಿಲನ್ನು ಹೇಳಿಕೊಂಡಿದ್ದಾರೆ.

ನಂತರ ಮಲ್ಲಿಕಾರ್ಜುನರವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ AEE ಸಂತೋಷ್ ಕುಮಾರ್ ಹಾಗೂ JE ಮಹದೇವ್ ರವರು ಗುತ್ತಿಗೆದಾರ ಮಲ್ಲಿಕಾರ್ಜುನರವರ ಆರೋಪ ಸುಳ್ಳು ಆರೋಪವಾಗಿದೆ. ಆ ವ್ಯಕ್ತಿ ನಿಯಮ ಉಲ್ಲಂಘನೆ ಮಾಡಿ ಕಾಮಗಾರಿ ಮಾಡಿದ್ದಾರೆ. JE ಸಹಿಯನ್ನು ತಾವೇ ಪೋರ್ಜರಿ ಮಾಡಿಕೊಂಡು ನಮ್ಮ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜಕೀಯದವರಿಂದ ಬಿಲ್ ಮಾಡುವಂತೆ ಒತ್ತಡ ಹಾಕುತ್ತಾರೆ.ಆತ್ಮಹತ್ಯೆ ಬೆದರಿಕೆ ಹಾಕಿ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.ಆಗಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ ರಜೆ ಹಾಕಬೇಕಾಗಿದೆ. ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ವರದಿ: ಸ್ವಾಮಿ ಬಳೇಪೇಟೆ




