ಚಾಮರಾಜನಗರ :ಜಿಲ್ಲೆ ಯಳಂದೂರು ಪಟ್ಟಣದಲ್ಲಿರುವ ಎಸ್ ಡಿ ವಿ ಎಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ವೃಂದದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ತಹಸೀಲ್ದಾರ್ ಎಸ್. ಎಲ್. ನಯನ ರವರು ಉದ್ಘಾಟಿಸಿ ಮಾತನಾಡಿದರು.
ನಂತರ 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಾದ ಅಭಿ ಶ್ರೀ ಆರ್ ನಾಯಕ್, ಪ್ರಣವಿ,ಸಹನ, ಸಂಧ್ಯಾ, ಸಿಂಚನ ರವರಿಗೆ ತಲಾ 10 ಸಾವಿರ ರೂಪಾಯಿ ಗಳಂತೆ ವಿದ್ವತ್ ಪ್ರೈವಿಟ್ ಲಿಮಿಟೆಡ್ ನಿರ್ದೇಶಕರಾದ ಸಿಂಧು. ಪಿ. ಡಿ ರವರು ವಿತರಿಸಿ ಮಾತನಾಡಿದರು.

ಎಸ್ ಡಿ ವಿ ಎಸ್ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಯೋಗೇಶ್ ರವರು ಭಾಗವಹಿಸಿ ಮಾತನಾಡಿದರು.ನಂತರ ಅಧ್ಯಕ್ಷತೆ ವಹಿಸಿಕೊಂಡಿದ್ದ ಪಿ ವೀರಭದ್ರಪ್ಪ ರವರು ಅಧ್ಯಕ್ಷಿಯಾ ನುಡಿಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವಿ. ಮಲ್ಲಿಕಾರ್ಜುನ ಸ್ವಾಮಿ, ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ, ಕಂದಾಯ ನಿರೀಕ್ಷಕರು ಯದುಗಿರಿ, ಶಿಕ್ಷಕರಾದ ಗುಂಬಳ್ಳಿ ಬಸವರಾಜು,ಮಹಾದೇವ, ಬಂಗಾರು,ಶಿವಮೂರ್ತಿ, ಮಂಜುನಾಥ್, ರಾಜಶೇಖರ್, ರಘು,ಶೀಲಾ, ಮಾದಲಂಬಿಕೆ,ನೀಲಂಬರಿ, ರೂಪ, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪೋಷಕರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ




