ಕಂದಗಲ್ಲ : ಇಲಕಲ್ಲ ನ ಹಡಪದ್ ಅಪ್ಪಣ್ಣನವರ ಸೇವಾ ಸಂಘದವರು ಏರ್ಪಡಿಸಿದ್ದ ಹಡಪದ್ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕಂದಗಲ್ಲ ಗ್ರಾಮದ ಹಡಪದ ಸಮಾಜದ ಯುವಕರದ ವೀರೇಶ್ ಶಂಕ್ರಪ್ಪ ಹಡಪದ, ಸುರೇಶ್ ತಿಪ್ಪಣ್ಣ ಹಡಪದ್, ಮಂಜುನಾಥ್ ಅಮರಪ್ಪ ಹಡಪದ್,ಸೇರಿದಂತೆ ಸಮಾಜ ಬಾಂಧವರನ್ನು ಗುರುತಿಸಿ ಇವರ ಸಮಾಜ ಸೇವಾ ಕಾರ್ಯವನ್ನು ಮೆಚ್ಚಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಲಕಲ್ಲ ಹಾಗೂ ಸುತ್ತಮುತ್ತಲಿನ ಹಡಪದ ಸಮಾಜ ಬಾಂಧವರು ಹಾಗೂ ಸಾರ್ವಜನಿಕಕರು ಉಪಸ್ಥಿತರಿದ್ದರು.




