——————-ನುಡಿದಂತೆ ನಡೆಯುವ ಅಭಿವೃದ್ಧಿ ಪರ ಸರ್ಕಾರ ಅದೇ ನಮ್ಮ ಕಾಂಗ್ರೆಸ್ : ಸಂಸದ ಸಾಗರ ಖಂಡ್ರೆ
ಭಾಲ್ಕಿ: ಪಿ.ಎಂ.ಜಿ.ಎಸ.ವೈ ಯೋಜನೆ ಅಡಿಯಲ್ಲಿ ಭಾಲ್ಕಿ ತಾಲೂಕಿನ ಮಳಚಾಪೂರದಿಂದ ತಾಲೂಕಾ ಗಡಿ (ಆಣದೂರ್ ಕಡೆಗೆ) ರಸ್ತೆ ಅಭಿವೃದ್ಧಿಗೆ ₹2.65 ಕೋಟಿ ಹಾಗೂ ಧನುರ್ ತಾಂಡಾದಿಂದ ಹಾಲಹಿಪ್ಪರ್ಗಾ ವರೆಗೆ ₹3.80 ಕೋಟಿ ರೂ. ಒಟ್ಟು 6.45 ಕೋಟಿ ರೂ. ಗಳ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಸಾಗರ ಖಂಡ್ರೆ ಅವರು ಇಂದು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, “ಗ್ರಾಮೀಣ ಭಾಗದ ಜನತೆ ಅಭಿವೃದ್ಧಿಯಾಗಬೇಕಾದರೆ ಉತ್ತಮ ರಸ್ತೆ ಸಂಪರ್ಕ ಅವಶ್ಯಕ. ಇದು ಕೇವಲ ಸಂಚಾರ ಸುಲಭಗೊಳಿಸುವುದಲ್ಲ, ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನಕ್ಕೂ ದಾರಿ ಮಾಡಿಕೊಡುತ್ತದೆ,” ಎಂದರು.
ಮುಂದುವರೆಸಿ ಮಾತನಾಡಿದ ಅವರು ನಮ್ಮ ಸರಕಾರದಲ್ಲಿರುವ ಫ್ರೀ ಭಾಗ್ಯ ಬಗ್ಗೆ ಒಂದಿಷ್ಟು ಜನ ಟೀಕೆ ಮಾಡ್ತಾ ಇರೋದು ಅಭಿವೃದ್ಧಿ ಕಾರ್ಯ ಆಗೋದಿಲ್ಲ ಅಂನ್ನುತಾ ಇರೋರಿಗೆ ನಾನು ಹೇಳಬಯಸುತ್ತೇನೇ ನಮ್ಮ ರಾಜ್ಯದ ಘನ ಮುಖ್ಯ ಮಂತ್ರಿಗಳಾದ ಸಿದ್ರಾಮಯ್ಯನವರು
ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುಧಾನ ಕೊಟ್ಟು ಇಷ್ಟೊಂದು ಬಜೆಟ್ ಕೊಟ್ಟಿದಕ್ಕೆ ಅಭಿವೃದ್ಧಿ ಕಾರ್ಯ ನಡೀತಾ ಇವೆ ಎಂದು ಹರ್ಷ ವ್ಯಕ್ತ ಪಡಿಸಿ. ಟೀಕೆ ಮಾಡುವವರು
ಇದನ್ನ ನೋಡಿ ಮಾತಾಡ್ಲಿ ಅಂತ ಟಾಂಗ್ ಕೊಟ್ಟರು.
ವರದಿ: ಸಂತೋಷ ಬಿಜಿ ಪಾಟೀಲ




