ಚಿಟಗುಪ್ಪ:ಇಂದು ಬೆಳಂ ಬೆಳಗ್ಗೆ ರಸ್ತೆಗಿಳಿದ ಜೆಸಿಬಿ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಇದು ನಡೆದಿದ್ದು ಬೀದರ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮನ್ನಾಖೇಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಎದರುಗಡೆ ತೆರವು ಕಾರ್ಯಾಚರಣೆ ನಡೆಯಿತು.

ಈ ಹಿಂದೆ ಗ್ರಾಮ ಪಂಚಾಯತ ವತಿಯಿಂದ ಅಂಗಡಿಗಳು ತೆರವು ಮಾಡಲು ನೋಟೀಸ್ ಹಾಗೂ ಹಲವು ಬಾರಿ ಸೂಚನೆ ಕೂಡ ನೀಡಲಾಗಿತ್ತು.ಆದರೆ ಇದಕ್ಕೆ ಕ್ಯಾರೇ ಎನ್ನದೆ ಅಂಗಡಿ ಮಾಲೀಕರು ತೆರವು ಮಾಡಿರಲಿಲ್ಲ.
ಹೀಗಾಗಿ ಇಂದು ಶನಿವಾರ ಬೆಳಂ ಬೆಳಗ್ಗೆ ಜೆಸಿಬಿ ಘರ್ಜನೆ ಮಾಡಲು ಬಂದಾಗ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದರು.ಇದಕ್ಕೆ ಅಧಿಕಾರಿಗಳು ಕ್ಯಾರೇ ಎನ್ನದೆ ಕಾರ್ಯಾಚರಣೆ ಪ್ರಾರಂಭ ಮಾಡಿದರು.
ಒಂದು ಅಂಗಡಿಗೆ ಜೆಸಿಬಿ ಹಚ್ಚುತ್ತಿದಂತೆ ಇಳಿದ ಅಂಗಡಿಗಳ ಮಾಲೀಕರು ಅಂಗಡಿಯಲ್ಲಿನ ವಸ್ತುಗಳು ತೆಗೆದುಕೊಳ್ಳಲು ಶುರು ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ ಪಂಚಾಳ,ಸಿಪಿಐ ಗುರು ಪಾಟೀಲ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ,ಅಧ್ಯಕ್ಷ ರಾಜಕುಮಾರ ಅಗಸಿ,ಪಿಎಸ್ಐಗಳಾದ ಮಹೇಂದ್ರಕುಮಾರ ಹಾಗೂ ನಿಂಗಪ್ಪ,ಗ್ರಾಮ ಪಂಚಾಯತ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ವರದಿ :ಸಜೀಶ ಲಂಬುನೋರ




