ತುರುವೇಕೆರೆ: ಪಟ್ಟಣದ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಹಿರಿಯ ರಂಗಭೂಮಿ ಕಲಾವಿದ ದೇವೀಹಳ್ಳಿ ಮಂಜಣ್ಣನವರ ಜನ್ಮದಿನದ ಅಂಗವಾಗಿ ಜುಲೈ 21 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.
ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ವಹಿಸಲಿದ್ದು, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್ (ರಾಜು), ಪಪಂ ಸದಸ್ಯ ಚಿದಾನಂದ್ ಉದ್ಘಾಟಿಸಲಿದ್ದಾರೆ. ಕ್ಯಾಮಸಂದ್ರ ಚಂದ್ರಮೂರ್ತಿ ಸಂಗೀತ ನಿರ್ದೇಶಿಸಲಿದ್ದು, ಅತಿಥಿಗಳಾಗಿ ಪಪಂ ಅಧ್ಯಕ್ಷೆ ಸ್ವಪ್ನನಟೇಶ್, ಟೌನ್ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ರಾಮೇಗೌಡ, ಪಪಂ ಸದಸ್ಯ ಸುರೇಶ್, ಟಿ.ಪಿ.ಮಹೇಶ್, ವಕೀಲ ಕೆ.ನಾಗೇಶ್, ನೆಮ್ಮದಿ ಗ್ರಾಮದ ಸಿ.ಎಸ್.ಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್, ಪಿಎಸ್ಐ ಕೃಷ್ಣಕುಮಾರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬೆಸ್ಕಾ ಎಇಇ ರಾಜಶೇಖರ್, ಹಿರಿಯ ರಂಗ ಕಲಾವಿದ ಸತೀಶ್, ಕಲ್ಕೆರೆ ಶಂಕರೇಗೌಡ, ಕಲ್ಕೆರೆ ಮಂಜುನಾಥ್, ಚಿಕ್ಕೀರಪ್ಪ, ಶಿವಯ್ಯ ಮುಂತಾದವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ದೇವಿಹಳ್ಳಿ ಮಂಜಣ್ಣನವರನ್ನು ಅಭಿನಂದಿಸಲಾಗುವುದು.
ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಟಿ.ಎನ್.ರಾಘವೇಂದ್ರ, ದೃತರಾಷ್ಟ್ರನಾಗಿ ಸಂತೋಷ್, ದುರ್ಯೋದನನಾಗಿ ಕುಮಾರಸ್ವಾಮಿ, ದುಶ್ಯಾಸನನಾಗಿ ಗೋವಿಂದರಾಜು, ಕರ್ಣನಾಗಿ ಗಿರೀಶ್, ಧರ್ಮನಾಗಿ ಶಿವಲಿಂಗಪ್ಪ, ಭೀಮನಾಗಿ ಕುಮಾರ್, ಅರ್ಜುನನಾಗಿ ಸಂತೋಷ್, ದ್ರೌಪದಿಯಾಗಿ ನಾಗಮಣಿ, ರುಕ್ಮಿಣಿಯಾಗಿ ಚೈತ್ರ, ಗಾಂಧಾರಿ, ಕುಂತಿಯಾಗಿ ರಾಜೇಶ್ವರಿ ಅಭಿನಯಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ಪ್ರದರ್ಶನ ಯಶಸ್ವಿಗೊಳಿಸಲು ಮಂಡಳಿ ಕೋರಿದೆ.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




