ಮೊಳಕಾಲ್ಮುರು : ಕಾಂಗ್ರೆಸ್ ಸರ್ಕಾರದಿಂದ ಅನೇಕ ಉತ್ತಮ ಕೆಲಸಗಳು ಆಗುತ್ತಿವೆ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಪಂಚ ಗ್ಯಾರಂಟಿ ಯೋಜನೆಗಳು ಬಹಳ ದಿನ ನಡೆಯುವುದಿಲ್ಲ ಎಂದು ಬಿಜೆಪಿಯವರು ಆರೋಪ ಮಾಡಿದರು ಇದಕ್ಕೆ ಉತ್ತರ ಮತ್ತೆ ಈ ಯೋಜನೆಯ 500 ಕೋಟಿಯ ಸಂಭ್ರಮಾಚರಣೆಯಲ್ಲಿ ನಡೆಯುತ್ತಿದೆ.
ಪಟ್ಟಣದಲ್ಲಿ ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 25 26ನೇ ಸಾಲಿನ ಟಿ ಎಸ್ ಪಿ ಯೋಜನೆಯೆ ಅಡಿಯಲ್ಲಿ ಹತ್ತು ಕೊಠಡಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದಿಂದ ಉತ್ತಮ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅವರ ಬಗ್ಗೆ ಕಾರ್ಯಕರ್ತರು ತಲೆಕಡಿಸಿಕೊಳ್ಳದೆ ಮುನ್ನುಗ್ಗಬೇಕು ಮೊಳಕಾಲ್ಮುರಿನ ಬಿಜೆಪಿಗರು ವಾಟ್ಸಾಪ್ ಫೇಸ್ ಬುಕ್ ನಲ್ಲಿ ಮಾತ್ರ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ ನರೇಂದ್ರ ಮೋದಿಯವರಿಗೂ ಇಂತಹ ಆಲೋಚನೆಗಳು ಬರುವುದಿಲ್ಲ ಅಂತಹ ನಿಷೇಮರು ಇಲ್ಲಿನ ಬಿಜೆಪಿಗರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳು ಉತ್ತಮ ರೀತಿಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದೆ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆಯು 500 ಕೋಟಿ ರೂ ದಾಟಿರುತ್ತದೆ ಇದರಿಂದ ಅನೇಕ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಆದ್ದರಿಂದ ಸರ್ಕಾರದ ಆದೇಶದ ಮೇರೆಗೆ ಸಂಭ್ರಮಾಚರಣೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಎನ್ ವೈ ಪಿ ಚೇತನ್ ರವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರಿಗೆ ಯುವಕರಿಗೆ ನಿರುದ್ಯೋಗಿಗಳಿಗೆ ತುಂಬಾ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಯ ಉದ್ದೇಶ ಕಟ್ಟೆ ಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವುದು,ಇದರಿಂದ ಅನೇಕ ಬಡ ಕುಟುಂಬಗಳು , ಜೀವನ ನಡೆಸಲು ಅನುಕೂಲವಾಗಿದೆ. ಅದರಲ್ಲಿ ಶಕ್ತಿ ಯೋಜನೆಯು 500 ಕೋಟಿ ದಾಟಿರುವುದು ಸಂತೋಷದ ವಿಚಾರ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಭಾನ್ ಸಾಬ್ ಮಾರನಾಯಕ ಇನ್ನು ಹಲವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ ಓ ಹನುಮಂತಪ್ಪ ಸಿಡಿಪಿಓ ನವೀನ್ ಕುಮಾರ್ ಗ್ಯಾರಂಟಿ ಯೋಜನೆಯ ಸದಸ್ಯರುಗಳು, ಗುತ್ತಿಗೆದಾರರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್ ಖಾದರ್, ಅಬ್ದುಲ್ಲಾ ಮುಖಂಡರುಗಳಾದ ಜಗಳೂರಯ್ಯ ಹೆಜ್ಜೇನಳ್ಳಿ ನಾಗರಾಜ್ ಗೋಪಾಲ್ ಸಿ ಪಿ ಐ ವಸಂತ್ ವಿ ಅಸೋದೆ ಸಬ್ ಇನ್ಸ್ಪೆಕ್ಟರ್ಗಳಾದ ಮಹೇಶ್ ಹೊಸಪೇಟೆ ಪಾಂಡುರಂಗಪ್ಪ ಬಾಹುಬಲಿ ಕಾಂಗ್ರೆಸ್ ಮುಖಂಡರು ಆಶಾ ಅಂಗನವಾಡಿ ಕಾರ್ಯಕರ್ತರು ಇನ್ನು ಹಲವರು ಉಪಸ್ಥಿತರಿದ್ದರು..
ವರದಿ : ಪಿಎಂ ಗಂಗಾಧರ




