ಸೇಡಂ: ತಾಲೂಕಿನ ಪಾಖಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ತುಂಬಾ ದಿನಗಳಿಂದ ಕಾಡುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಕ್ಯಾರೇ ಎನ್ನುತ್ತಿಲ್ಲ. ಬೆಳಿಗ್ಗೆ ೮ಗಂಟೆಗೆ ಶಾಲೆ ಕಡೆ ಹೋಗಿ ಸುಮಾರು ೫೦೦ಮೀಟರ್ ದೂರದಿಂದ ನೀರು ತಂದು ಡ್ರಮ್ ನಲ್ಲಿ ತುಂಬಿಡುವ ಕೆಲಸ ಅಡಿಗೆ ಸಹಾಯಕಿ ಮಾಡುತ್ತಾರೆ.
ಪ್ರತಿದಿನ ನೀರು ಡ್ರಮ್ ನಲ್ಲಿ ತುಂಬಬೇಕು ಪ್ರತಿ ವಿದ್ಯಾರ್ಥಿ ಕೇವಲ ಅರ್ಧ ಗ್ಲಾಸ್ ನೀರು ಉಪಯೋಗ ಮಾಡಬೇಕು ಇಲ್ಲವಾದಲ್ಲಿ ಮಕ್ಕಳಿಗೆ ನೀರು ಸಾಕಾಗಲ್ಲ.
ಮಾಲ ಮೂತ್ರ ವಿಸರ್ಜನೆ ಬಂದರು ಸಹ ಅದೇ ನೀರನ್ನು ಉಪಯೋಗಿಸಬೇಕು ಎಂದು ಮುಖ್ಯ ಗುರುಗಳು ತಿಳಿಸುತ್ತಾರೆ.
ಇಲ್ಲಿ ಇನ್ನೊಂದು ವಿಶೇಷ ಎಂದರೆ ಇಲ್ಲಿನ ಮುಖ್ಯ ಗುರುಗಳು ತಾಲೂಕಿನ ನೌಕರ ಸಂಘದ ಅದ್ಯಕ್ಷರು ಆಗಿದ್ದಾರೆ ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು.
ಅಷ್ಟೇ ಅಲ್ಲದೆ ಇಲ್ಲಿ ಅಡಿಗೆ ಸಹಕಿಯರು ಕೇವಲ ಒಬ್ಬರೇ ಇರುವರು. ಇನ್ನೊಬ್ಬರನ್ನು ನೇಮಕ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ನೀಡಿದರೆ ಇಂತಹ ಇನ್ನೂ ಮೂರು ಮನವಿ ಪತ್ರಗಳು ಬರಬೇಕು ಆವಾಗ ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗುವುದು ಎಂದಿದ್ದಾರೆ ಎಂದು ಶಿಕ್ಷಕರು ಹೇಳಿಕೆ ನೀಡಿದರು.
ಇಷ್ಟೊಂದು ನಿರ್ಲಕ್ಷ್ಯ ಮಾಡುತ್ತಿರುವ ಚಂದಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಮುಧೋಳ ವಲಯ ಅಧ್ಯಕ್ಷರಾದ ಸಾಬಪ್ಪ ಅಬ್ಬಗಳ, ಉಪಾಧ್ಯಕ್ಷರಾದ ಕಾಶಪ್ಪ ಮೆದಕ್, ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀನಿವಾಸ್ ಗುತ್ತೇದಾರ್, ಶೇಖರ್ ಸ್ವಾಮಿ ನಾಯಿಕೊಡಿ ಹಾಗೂ ಗ್ರಾಮದ ಯುವ ಮುಖಂಡರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




