ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಬಲಿಷ್ಠ ಕ್ಷೇತ್ರವಾಗಿದೆ ಜೆಡಿಎಸ್ ಹೆಸರಿನಲ್ಲಿ ಅಧಿಕಾರ ರುಚಿ ನೋಡಿ ಪಕ್ಷಕ್ಕೆ ಮೋಸ ಮಾಡಿ ಹೋದರು ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಕುಗ್ಗಿಲ್ಲ ಎಂದು ಹೆಸರು ಹೇಳದೆ ಮಾಜಿ ಶಾಸಕ ರೋಬ್ಬರ ಮೇಲೆ ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ್ರು ಹರಿಹಾಯ್ದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಹಿರಿಯ ರಾಜಕಾರಣಿ ದಿವಂಗತ ಗುಂಡಪ್ಪ ಅವರ ಸುಪುತ್ರ ಹಾಗೂ ಚಿಕ್ಕಸಂದ್ರ ವಾರ್ಡಿನ ಜೆಡಿಎಸ್ ಅಧ್ಯಕ್ಷ ಭಾರತ್ ಗುಂಡಪ್ಪ ಅವರ ನೇತೃತ್ವದಲ್ಲಿ ತಮ್ಮ ಸಿಡ್ಡೆದಳ್ಳಿಯಲ್ಲಿರುವ ಶ್ರೀರಾಮ ಟವರ್ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷ ಪೂರ್ವ ಭಾವಿ ಸಭೆಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಚಿಕ್ಕಸಂದ್ರ ವಾರ್ಡಿನ ಜೆಡಿಎಸ್ ಅಧ್ಯಕ್ಷ ಹಾಗೂ ಬಿಬಿಎಂಪಿ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಭಾರತ್ ಗುಂಡಪ್ಪ ಅವರು ಸರ್ವರಿಗೂ ಸ್ವಾಗತಿಸಿದರು.
ನಗರ ಸಭಾ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಂದಾನಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಎಲ್ಲಾದರಲ್ಲೂ ವಿಫಲವಾಗಿದೆ ಕಾಂಗ್ರೆಸ್ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ ಈ ಸರ್ಕಾರ ಶಿಘ್ರದಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ನಗರ ಸಭಾ ಸದಸ್ಯ ಹಿರಿಯ ನಾಯಕ ಶಿವಣ್ಣ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಅವರು ಚಿಕ್ಕ ವಯಸ್ಸಿನಲ್ಲೇ ಪಕ್ಷ ಸಂಘಟನೆ ಸದಸ್ಯತ್ವ ಅಭಿಯಾನ ಕೈಗೊಂಡು ರಾಜ್ಯ ಪ್ರಸಾದ ಮಾಡುತ್ತಿದ್ದಾರೆ ‘ ಜನರೊಂದಿಗೆ ಜನತಾದಳ’ ಎಂಬ ವಿಚಾರಧಾರೆ ಇಟ್ಟು ಕೊಂಡು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಅವರಿಗೆ ಜೆಡಿಎಸ್ ನ ಹಿರಿಯ ನಾಯಕರು ಮುಖಂಡರು ಮಹಿಳೆಯರು ಕಾರ್ಯಕರ್ತರು ನಿಖಿಲ್ ಕುಮಾರ್ ಸ್ವಾಮಿ ಕೈ ಬಲ ಪಡಿಸ ಬೇಕು ಎಂದು ಮಾಜಿ ನಗರ ಸಭಾ ಸದಸ್ಯ ಶಿವಣ್ಣ ಸಲಹೆ ನೀಡಿ ಮಾತನಾಡಿದರು.
ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುನೇಗೌಡರು ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಲವಾಗಿ ಬೆಳೆದಿದೆ ಅದನ್ನು ಕುಂಠಿತ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ನಾವುಗಳು ಒಂದಾಗಿ ಒಗ್ಗಟ್ಟಾಗಿ ಪಕ್ಷ ಕಟ್ಟುವಣ ಕಾಂಗ್ರೆಸ್ ಪಕ್ಷದಲ್ಲಿ ಮುಸಿಕಿನ ಗುದ್ದಾಟ ಪ್ರಾರಂಭವಾಗಿದೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದರಿಂದ ಕಾಂಗ್ರೆಸ್ದಲ್ಲಿ ಭವಿಷ್ಯ ಇಲ್ಲಾ ಎಂದು ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿ ಆಕಾಂಕ್ಷಿಗಳು ಜೆಡಿಎಸ್ ಪಕ್ಷದ ಕಡೆಗೆ ಮುಖಮಾಡಿದ್ದಾರೆ ಮುನೇಗೌಡರು ಎಂದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮುನಿಸ್ವಾಮಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಣ್ಣ, ಉಸ್ತುವಾರಿ ಜಗದೀಶ್, ಮಾಜಿ ನಗರ ಸಭಾ ಸದಸ್ಯ ಗೋಪಾಲಕೃಷ್ಣ, ನರಸಿಂಹಮೂರ್ತಿ (ಸಿಂಹ), ರಾಜಗೋಪಾಲನಗರ ವಾರ್ಡಿನ ಜೆಡಿಎಸ್ ಅಧ್ಯಕ್ಷ ತಿಮ್ಮರಾಜು, ಹನುಮಂತೇಗೌಡ, ವೆಂಕಟೇಶ್, ಗೋವೀಂದಪ್ಪ, ಸೇವಾದಳದ ಮುಖಂಡ ಪಾಪಣ್ಣ , ಪ್ರಮೋದ್ ಭೈರಪ್ಪ, ಸುಮಂತ್, ಬಲರಾಮ್ ಗೌಡ, ರಮೇಶ್, ವಾಸುದೇವ, ಪ್ರಕಾಶ್,ಮಾಜಿ ಅಧ್ಯಕ್ಷೆ ರಾಣಿ ಸತೀಶ್, ಅಧ್ಯಕ್ಷೆ ಶೈಲಜಾ, ಛಾಯಾ ಸೇರಿದಂತೆ ಎಲ್ಲಾ ವಾರ್ಡ್ ಅಧ್ಯಕ್ಷರು ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




