Ad imageAd image

ಖಾಯಂ ಪಿಡಿಒ ನೇಮಕ ಮಾಡಲು ಆಗ್ರಹ

Bharath Vaibhav
ಖಾಯಂ ಪಿಡಿಒ ನೇಮಕ ಮಾಡಲು ಆಗ್ರಹ
WhatsApp Group Join Now
Telegram Group Join Now

ಚಿಟಗುಪ್ಪ:ಬೆಳಕೇರಾ ಗ್ರಾಮ ಪಂಚಾಯತಿಗೆ ಖಾಯಂ ಪಿಡಿಒ ಹಾಗೂ ಗ್ರೇಡ್ 1 ಕಾರ್ಯದರ್ಶಿಯನ್ನು ನೇಮಕ ಮಾಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ ರೆಡ್ಡಿ ಹಾಗೂ ರಾಜ ರೆಡ್ಡಿ ಆಗ್ರಹಿಸಿದ್ದಾರೆ.ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಸೋಮುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು.

ಈ ಗ್ರಾಮ ಪಂಚಾಯತಿಗೆ ಸುಮಾರು 20 ದಿನಗಳಿಂದ ಪಿಡಿಒ ಇಲ್ಲ.ಗ್ರಾಮ ಪಂಚಾಯತ ವ್ಯಾಪ್ತಿಯ ಬನ್ನಳ್ಳಿ ಗ್ರಾಮದ ರಾಮನಗರದಲ್ಲಿ ನೀರಿನ ಸಮಸ್ಯೆಯಾಗುತ್ತಿದೆ.ನರೇಗಾ ಯೋಜನೆ ಕೂಲಿ ಕಾರ್ಮಿಕರು ಕೂಲಿಗಾಗಿ ಪಂಚಾಯತ ಅಲೆಯುತ್ತಿದ್ದಾರೆ,ಪಿಡಿಒ ಇಲ್ಲದ ಕಾರಣ ಕೂಲಿ ಸಿಗುತ್ತಿಲ್ಲ.ಇದರಿಂದ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಿವೆ.ಈ ಕುರಿತು ತಾಲೂಕು ಪಂಚಾಯತ ಇಒ ಅವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನೆಯಾಗಿಲ್ಲ.ಅವರು ಸಮಾಧಾನಕರ ಬಹುಮಾನ ಕೊಟ್ಟಂತೆ ಮಾತನಾಡಿ ಸಮಾಧಾನಪಡಿಸಿ ಕಳುಹಿಸಿ ಕೊಡುತ್ತಾರೆ.ಅವರು ಕೂಡ ಖಾಯಂ ಇಒ ಅಲ್ಲ,ಪ್ರಭಾರ ವಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅನಿಲಕುಮಾರ ಕುಲಕರ್ಣಿ ಹಾಗೂ ಅವರ ನಂತರ ಅಮೃತ ಎಂಬ ಪಿಡಿಒ ಅವರನ್ನು ಪ್ರಭಾರ ವಹಿಸಲು ಗ್ರಾಮ ಪಂಚಾಯತಗೆ ನಿಯೋಜನೆ ಮಾಡಲಾಗಿತ್ತು,ಆದರೆ ಇವರಿಬ್ಬರು ಅಧಿಕಾರ ಸ್ವೀಕಾರ ಮಾಡಿಕೊಂಡಿಲ್ಲ.ಹಾಗಾಗಿ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾಗುವ ಮುಂಚೆಯೇ ಮೇಲಾಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಖಾಯಂ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು ಎಂದು ಸದಸ್ಯ ವೆಂಕಟ ರೆಡ್ಡಿ ಆಗ್ರಹಿಸಿದರು.

ಇನ್ನೊರ್ವ ಸದಸ್ಯ ರಾಜರೆಡ್ಡಿ ಮಾತನಾಡಿ, ಪಿಡಿಒ ಆಗಿ ಯಾರನ್ನು ಬೇಕಾದರೂ ನಿಯೋಜನೆ ಮಾಡಲಿ,ನಮಗೆ ಯಾವುದೇ ಅಭ್ಯಂತರವಿಲ್ಲ,ಕಾಲಹರಣ ಮಾಡುವುದರಿಂದ ದಿನಗಳು ಕಳೆಯುತ್ತಿವೆ.ಆದಷ್ಟು ಬೇಗ ಪಿಡಿಒ ನಮ್ಮ ಗ್ರಾಮ ಪಂಚಾಯತಿಗೆ ನಿಯೋಜನೆ ಮಾಡಬೇಕು ಎಂದು ಹೇಳಿದರು.

ಈ ಕುರಿತು ನಮ್ಮ ಮಾಧ್ಯಮ ಪ್ರತಿನಿಧಿ ತಾಲೂಕು ಪಂಚಾಯತ ಇಒ ಲಕ್ಷ್ಮೀ ಬಿರಾದಾರ ಅವರನ್ನು ದುರವಾಣಿ ಮೂಲಕ ಸಂಪರ್ಕಿಸಿದಾಗ,ಬನ್ನಳ್ಳಿ ಗ್ರಾಮದಲ್ಲಿನ ನೀರಿನ ಸಮಸ್ಯೆ ನನ್ನ ಗಮನಕ್ಕೆ ತಂದಿಲ್ಲ,ಸಮಸ್ಯೆಯಾಗುತ್ತಿದ್ದರೆ ಶೀಘ್ರದಲ್ಲಿ ಅದನ್ನು ಸರಿಪಡಿಸಲು ಸೂಚಿಸಲಾಗುತ್ತದೆ.ಬೆಳಕೇರಾ ಗ್ರಾಮ ಪಂಚಾಯತಗೆ ಪ್ರಭಾರಿ ಪಿಡಿಒ ನಿಯೋಜನೆ ಮಾಡಲಾಗಿದೆ.ನಿಯೋಜಿಸಿದ ಪಿಡಿಒ ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

 

ವರದಿ:ಸಜೀಶ ಲಂಬುನೋರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!