ವಿಜಯಪುರ:ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕೂಡಗಿ ಎನ್ ಟಿಪಿಸಿ ಪೊಲೀಸ್ ಠಾಣೆಯ ವತಿಯಿಂದ ಸಾರ್ವಜನಿಕರ ಸುರಕ್ಷತೆಗಾಗಿ “ಮನೆ ಮನೆಗೆ ಪೊಲೀಸ್”ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೂಡಗಿ ಎನ್ ಟಿಪಿಸಿ ಪಿಎಸ್ಐ ಆದ ಯತೀಶ್ ಉಪ್ಪಾರ,ಸಾರ್ವಜನಿಕರಿಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ದೇಶ ಈಗಿನ ಯುವಕರು ಮೊಬೈಲ್ ಪೋನನಲ್ಲಿ ಲೋನ್ ಹಾಕುತ್ತೇವೆ ಅಂತ ಮೋಸ ನಡೆಯುತ್ತಾ ಇದೆ,ಮೊದಲು ಹಿಂದಿಯಲ್ಲಿ ಮಾತನಾಡುತ್ತಿದ್ದರು ಆದರೆ ಈಗ ಕನ್ನಡದಲ್ಲಿಯೂ ಸ್ಕ್ಯಾಮ ನಡೆಯುತ್ತಿದೆ ಯುವಕರು ಜಾಗೃತರಾಗಬೇಕು.
ಬಾಲ್ಯವಿವಾಹ ತಡೆಯಲು ಸಹಕಾರ ಮಾಡಬೇಕು. ದಿನೇ ದಿನೇ ಕಳ್ಳತನ ಪ್ರಕರಣಗಳು ಕಾಣಸಿಗುತ್ತವೆ ಆದ ಕಾರಣ ಅನುಕೂಲ ಇದ್ದವರುಸಿಸಿ ಕ್ಯಾಮೆರಾ ಹಾಕಿಸಿಕೊಳ್ಳಿ, ಏನೇ ಸಮಸ್ಯೆಯಾದರೂ ತುರ್ತು ಸಹಾಯವಾಣಿ 112 ಗೆ ಕರೆಮಾಡಿ ಹಾಗೆಯೇ ಪ್ರತಿಯೊಬ್ಬರೂ ನಿಮ್ಮ ಗ್ರಾಮದ ಬಿಟ್ ಪೊಲೀಸರನ್ನು ಸಂಪರ್ಕಿಸಿ ಎಂದರು. ಈ ಸಂದರ್ಭದಲ್ಲಿ ಮುತ್ತಗಿ ಗ್ರಾಮದ ಗುರು ಹಿರಿಯರು ಸ್ಥಳದಲ್ಲಿ ಹಾಜರಿದ್ದರು.




