Ad imageAd image

ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ 

Bharath Vaibhav
ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ 
WhatsApp Group Join Now
Telegram Group Join Now

ಬಾಗಲಕೋಟೆ : ರಾಜ್ಯದಲ್ಲಿ 2 A ಮೀಸಲಾತಿಗೆ ಜಯಮೃತ್ಯುಂಜಯ ಶ್ರೀಗಳು ಪಣ ತೊಟ್ಟಿದ್ದರೆ, ಅತ್ತ ಬಾಗಲಕೋಟೆಯ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಬಿದ್ದಿದೆ.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಹೋರಾಟಕ್ಕೆ ಮುಂಚೂಣಿಯಲ್ಲಿದ್ದ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟವನ್ನು ಮುಂದುವರಿಸುತ್ತಿದ್ದರೇ, ಅಂತಹ ಸಮಯದಲ್ಲಿ ಅವರ ಆಧ್ಯಾತ್ಮಿಕ ಪೀಠವಿರುವ ಕೂಡಲಸಂಗಮದಲ್ಲಿಯೇ ಪೀಠಕ್ಕೆ ಬೀಗ ಹಾಕಲಾಗಿದೆ.

ಕಳೆದ ಕೆಲವು ದಿನಗಳಿಂದ ಪೀಠಾಧ್ಯಕ್ಷರ ಬದಲಾವಣೆ ಕೂಗು ಜೋರಾಗಿ ಕೇಳಿ ಬರುತ್ತಿತ್ತು. ಅಷ್ಟೇ ಅಲ್ಲದೆ ಪ್ರಸಂಗ ಬಂದರೆ ಪೀಠಾಧ್ಯಕ್ಷರನ್ನು ಬದಲಾವಣೆ ಮಾಡ್ತೀವಿ ಅಂತ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದರು. ಆದರೆ ಇದೀಗ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಪೀಠಕ್ಕೆ ಬೀಗ ಬಿದ್ದಿದೆ.

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಕಾಂಗ್ರೆಸ್ ನ ಪಂಚಮಸಾಲಿ ನಾಯಕರು ಹೋರಾಟಗಾರರಾದ ವಿಜಯಾನಂದ ಕಾಶಪ್ಪನರ್‌, ಹೆಬ್ಬಾಳ್ಕರ್‌, ಹಾಗೂ ಬಿಜೆಪಿ ನಾಯಕರಾದ ಯತ್ನಾಳ್‌ ಮುಂಚೂಣಿ ಹೋರಾಟ ನಡೆಸಿದ್ದರು.

ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕೈ ನಾಯಕರು ಮಧ್ಯದಲ್ಲೇ ಎಸ್ಕೇಪ್ ಆಗಿದ್ದರು. ಈ ವೇಳೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಯತ್ನಾಳ್ ಇಬ್ಬರೇ 2A ಮೀಸಲಾತಿಗೆ ಹೋರಾಟ ನಡೆಸಿದ್ದರು. ಇದೇ ಇಬ್ಬರ ನಡುವೆ ಬಿರುಕು ಮೂಡಲು ಕಾರಣವಾಗಿತ್ತು.

ಈ ಬೆಳವಣಿಗೆಯ ಬಳಿಕ ವಿಜಯಾನಂದ ಕಾಶಪ್ಪನರ್‌ ಹಾಗೂ ಶ್ರೀಗಳ ನಡುವೆ ಮಾತಿನ ಸಮರ ಉಂಟಾಗಿತ್ತು. ಈ ವೇಳೆ ಕಾಶಪ್ಪನವರ್‌, ಅನಿವಾರ್ಯ ಬಂದರೆ ಪೀಠದಿಂದಲೇ ಅವರನ್ನು ಇಳಿಸುತ್ತೇವೆ ಎಂದಿದ್ದರು. ಈ ಮಾತಿನ ನಡುವೆ ಕೂಡಲ ಸಂಗಮದ ಪೀಠಕ್ಕೆ ಬೀಗ ಬಿದ್ದಿದೆ.

ಸದ್ಯ ಈ ಕ್ರಮವು ಪೀಠದ ಟ್ರಸ್ಟ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕರಾದ ವಿಜಯಾನಂದ ಕಾಶಪ್ಪನವರ ಸೂಚನೆಯ ಮೇರೆಗೆ ನಡೆದಿದೆ ಎನ್ನಲಾಗಿದ್ದು, ಈ ಕುರಿತಾಗಿ ಹುನಗುಂದ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಅಷ್ಟೇ ಅಲ್ಲದೆ ಪೀಠದ ಬೀಗ ಮುರಿದ ಆರೋಪದ ಮೇಲೆ ಸ್ವಾಮೀಜಿಯ ಬೆಂಬಲಿಗರ ಐವರ ಮೇಲೆ ಎಫ್‌ಐಆರ್ ದಾ ಖಲಾಗಿದೆ.ಕಳೆದ ಕೆಲವು ದಿನಗಳಿಂದ ಪೀಠಾಧ್ಯಕ್ಷರ ಬದಲಾವಣೆ ಕೂಗು ಜೋರಾಗಿ ಕೇಳಿ ಬರುತ್ತಿತ್ತು. ಅಷ್ಟೇ ಅಲ್ಲದೆ ಪ್ರಸಂಗ ಬಂದರೆ ಪೀಠಾಧ್ಯಕ್ಷರನ್ನು ಬದಲಾವಣೆ ಮಾಡ್ತೀವಿ ಅಂತ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದರು. ಆದರೆ ಇದೀಗ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಪೀಠಕ್ಕೆ ಬೀಗ ಬಿದ್ದಿದೆ.

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಕಾಂಗ್ರೆಸ್ ನ ಪಂಚಮಸಾಲಿ ನಾಯಕರು ಹೋರಾಟಗಾರರಾದ ವಿಜಯಾನಂದ ಕಾಶಪ್ಪನರ್‌, ಹೆಬ್ಬಾಳ್ಕರ್‌, ಹಾಗೂ ಬಿಜೆಪಿ ನಾಯಕರಾದ ಯತ್ನಾಳ್‌ ಮುಂಚೂಣಿ ಹೋರಾಟ ನಡೆಸಿದ್ದರು.

ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕೈ ನಾಯಕರು ಮಧ್ಯದಲ್ಲೇ ಎಸ್ಕೇಪ್ ಆಗಿದ್ದರು. ಈ ವೇಳೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಯತ್ನಾಳ್ ಇಬ್ಬರೇ 2A ಮೀಸಲಾತಿಗೆ ಹೋರಾಟ ನಡೆಸಿದ್ದರು. ಇದೇ ಇಬ್ಬರ ನಡುವೆ ಬಿರುಕು ಮೂಡಲು ಕಾರಣವಾಗಿತ್ತು.

ಈ ಬೆಳವಣಿಗೆಯ ಬಳಿಕ ವಿಜಯಾನಂದ ಕಾಶಪ್ಪನರ್‌ ಹಾಗೂ ಶ್ರೀಗಳ ನಡುವೆ ಮಾತಿನ ಸಮರ ಉಂಟಾಗಿತ್ತು. ಈ ವೇಳೆ ಕಾಶಪ್ಪನವರ್‌, ಅನಿವಾರ್ಯ ಬಂದರೆ ಪೀಠದಿಂದಲೇ ಅವರನ್ನು ಇಳಿಸುತ್ತೇವೆ ಎಂದಿದ್ದರು. ಈ ಮಾತಿನ ನಡುವೆ ಕೂಡಲ ಸಂಗಮದ ಪೀಠಕ್ಕೆ ಬೀಗ ಬಿದ್ದಿದೆ.

ಸದ್ಯ ಈ ಕ್ರಮವು ಪೀಠದ ಟ್ರಸ್ಟ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕರಾದ ವಿಜಯಾನಂದ ಕಾಶಪ್ಪನವರ ಸೂಚನೆಯ ಮೇರೆಗೆ ನಡೆದಿದೆ ಎನ್ನಲಾಗಿದ್ದು, ಈ ಕುರಿತಾಗಿ ಹುನಗುಂದ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಅಷ್ಟೇ ಅಲ್ಲದೆ ಪೀಠದ ಬೀಗ ಮುರಿದ ಆರೋಪದ ಮೇಲೆ ಸ್ವಾಮೀಜಿಯ ಬೆಂಬಲಿಗರ ಐವರ ಮೇಲೆ ಎಫ್‌ಐಆರ್ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!