ಸೇಡಂ: ಕನ್ನಡ ಶಾಲೆಗಳ ರಕ್ಷಣೆಗೆ ಹಾಗೂ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಕನ್ನಡ ಶಾಲೆಗಳ ಉಳಿಸಿ ಹಾಗೂ ಕನ್ನಡ ಶಾಲೆಗಳ ಸಬಲೀಕರಣ ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಕಳೆದ ೯-೧೦ ವರ್ಷಗಳಿಂದ ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚುವುದಕ್ಕೆ ಕಾರಣ ಸರ್ಕಾರದ ವಿಪರೀತ ಕಠಿಣ ನಿಯಮಗಳು. ಇವುಗಳಿಂದ ಕನ್ನಡ ಶಾಲೆಗಳು ಸೋತು ಸೊರಗುತ್ತಿವೆ. ಇವತ್ತು ನಮ್ಮ ಮಾತೃ ಭಾಷೆ ಉಳಿಯಬೇಕು, ಕನ್ನಡ ಉಳಿಯಬೇಕು ಅಂದರೆ ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು ಇದು ಸರ್ಕಾರದ ಮುಖ್ಯದ್ಯೇಯವಾಗಬೇಕು ಆದರೆ ದುರದೃಷ್ಟವಶತ್ ಇದು ಆಗುತ್ತಿಲ್ಲ. ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕರ್ನಾಟಕದ ಮಟ್ಟಿಗೆ ಬಹಳ ಚಿಂತಾಜನಕ ಸಂಗತಿಯಾಗಿದೆ. ಹಲವಾರು ಖಾಸಗಿ ಕನ್ನಡ ಮಾದ್ಯಮ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ ಶಾಲೆಗಳನ್ನು ನಡೆಸಲು ಅಗದ ಪರಿಸ್ಥಿತಿ ಇದೆ ಈ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಮಾರಣಹೋಮ ಆಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್, ಚಂದ್ರಶೇಖರ್ ಪೂಜಾರಿ, ಮಹೇಶ್ ಪಾಟೀಲ್, ದೇವಕುಮಾರ್ ನಾಟಿಕರ್, ಚಂದ್ರಶೇಖರ್ ಮಡಿವಾಳ, ವಿಜಯಕುಮಾರ್ ಗುತ್ತೇದಾರ್, ರಾಘವೇಂದ್ರ ಒನ್ನಿಗೇರಿ, ಸುನಿಲ, ಚಂದ್ರಶೇಖರ್ ರಿಬ್ಬನ್ ಪಲ್ಲಿ, ಕೃಷ್ಣ ಮುಧೋಳ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




