Ad imageAd image

ಬಿಜೆಪಿ ಸಾಮಾಜಿಕ ನ್ಯಾಯ,ಮೀಸಲಾತಿ ವಿರೋಧಿ : ಸಿದ್ದರಾಮಯ್ಯ 

Bharath Vaibhav
ಬಿಜೆಪಿ ಸಾಮಾಜಿಕ ನ್ಯಾಯ,ಮೀಸಲಾತಿ ವಿರೋಧಿ : ಸಿದ್ದರಾಮಯ್ಯ 
WhatsApp Group Join Now
Telegram Group Join Now

ಬೆಂಗಳೂರು : ಬಿಜೆಪಿ ನಿರಂತರವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿರುವುಕ್ಕೆ ಇಡೀ ದೇಶ ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಇಂದು (ಜು.15) KPCC ಕಚೇರಿಯಲ್ಲಿ ನಡೆದ AICC ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಎಲ್ಲಾ ರಾಜ್ಯ ಮತ್ತು ರಾಷ್ಟ್ರೀಯ OBC ನಾಯಕರ ಇವತ್ತಿನ ಮೊದಲ ಸಭೆ‌ ಅರ್ಥಪೂರ್ಣವಾಗಿ ನಡೆದಿದೆ.

ನನ್ನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಸುವಂತೆ ಸಲಹಾ ಸಮಿತಿ ಅಧ್ಯಕ್ಷರು ಸೂಚಿಸಿದ್ದರಿಂದ ನನ್ನ ಅಧ್ಯಕ್ಷತೆಯಲ್ಲೇ ಸಭೆ ನಡೆದಿದೆ. ನಾಳೆಯೂ ಸಭೆ ಮುಂದುವರೆಯಲಿದೆ.ಈ ಸಭೆ ಬಳಿಕ ವಿವರವಾಗಿ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸ್ ಅವರ ಭೂಮಿಯಿಂದ, ಸಾಮಾಜಿಕ ನ್ಯಾಯವನ್ನು ಕೇವಲ ಘೋಷಣೆಯಾಗಿ ಅಲ್ಲ, ಜೀವಂತ ರಾಜಕೀಯ ಚೈತನ್ಯವಾಗಿ ಒಪ್ಪಿಕೊಂಡ ಈ ನಾಡಿನಿಂದ ನಿಮಗೆ ಆತ್ಮೀಯ ಸ್ವಾಗತ.ಇಂದು ನಾನು ಇಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಮಾತ್ರವಲ್ಲ, ಸಾಮಾಜಿಕ ನ್ಯಾಯವನ್ನು ನಂಬುವ ಎಲ್ಲರ ಪ್ರತಿನಿಧಿಯಾಗಿ ನಿಂತಿದ್ದೇನೆ ಎಂದು ಸಿಎಂ

ಈ ಸಭೆ ಕೇವಲ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಹೋರಾಟವಲ್ಲ. ಇದು ಗೌರವ, ಘನತೆ ಮತ್ತು ಅಧಿಕಾರಕ್ಕಾಗಿ ಹೋರಾಟ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ, ‘ಶಿಕ್ಷಣ ಪಡೆಯಿರಿ, ಚೈತನ್ಯ ತುಂಬಿರಿ, ಸಂಘಟಿತರಾಗಿರಿ.’ OBC, SC, ST ಮತ್ತು ಅಲ್ಪಸಂಖ್ಯಾತ ಸಮುದಾಯಗಳಾದ AHINDA ಸಮುದಾಯಗಳ ಜನರು ಗಣನೆಗೆ ಮಾತ್ರವಲ್ಲ, ಆಲಿಸಲ್ಪಡಬೇಕು. ಇಲ್ಲದಿದ್ದರೆ ಭಾರತವು ಎಂದಿಗೂ ನಿಜವಾದ ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ ಎಂದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!