ಸೇಡಂ:ತಾಲೂಕಿನ ಯಾನಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸ್ವಚ್ಚತೆಗೆ ವಿಶೇಷ ಕ್ರಮ ವಹಿಸಿದೆ ಎಂದು ಸ್ಪಷ್ಟವಾಗಿ ಕಾಣುತ್ತಿದೆ.
ನಮ್ಮ ಭಾರತ ವೈಭವ ನ್ಯೂಸ್ ವರದಿಗಾರರು ಶಾಲೆಗೆ ಬೇಟಿ ನೀಡಿದಾಗ ಮುಖ್ಯ ಗುರುಗಳಾದ ಶರಣಪ್ಪ ಮತ್ತು ಮಹಿಪಾಲ ದೊಡ್ಮನಿ ಅವರ ಸಮ್ಮುಖದಲ್ಲಿ ವೀಕ್ಷಣೆ ಮಾಡುವಾಗ ಶಾಲೆಯಲ್ಲಿ ಸುಂದರವಾದ ವಾತಾವರಣ ಕಾಣಿಸಿಕೊಂಡಿದೆ.
ಇಲ್ಲಿನ ಮಕ್ಕಳು ಅಕ್ಷರ ಅಭ್ಯಾಸದಲ್ಲಿ ತುಂಬಾ ಜಾಣರಾಗಿದ್ದಾರೆ. ಶಿಸ್ತಿನ ಕ್ರಮ ಕೈಗೊಂಡು ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರನ್ನು ನೋಡಿದರೆ ನಮ್ಮ ಬಾಲ್ಯದ ನೆನಪುಗಳು ಮೊದಲಾಗುತ್ತವೆ.

ಶಾಲೆಯ ಆವರಣದಲ್ಲಿ ಮಕ್ಕಳಿಗೆ ಯಾವುದೇ ವಿಷಪೂರಿತ ಜೀವಿಗಳಿಂದ ಅಪಘತವಾಗದಂತೆ ಔಷದಿ ಸಿಂಪರ್ಣೆ ಮಾಡಿ ಬೆಳೆದಿರುವ ಮುಳ್ಳು ತಂಟೆಗಳನ್ನು ಹೆಚ್ಚಾಗಿ ಎತ್ತರವಾಗದಂತೆ ಮಾಡಿದ್ದಾರೆ. ಗಾರ್ಡನ್ ಶಿಸ್ತಿನಿಂದ ಕೂಡಿದೆ.
ಸ್ಟಾಫ್ ರೂಂನಲ್ಲಿ ವಿವಿಧ ಮಹಾನ್ ನಾಯಕರ ಫೋಟೋ ಫ್ರೇಮ್ ಗಳು ಗೋಡೆಯ ಸಾಲಾಗಿ ಕಾಣುತ್ತವೆ.
ಇಲ್ಲಿ ಇರುವುದು ಮೂವರೇ ಶಿಕ್ಷಕರು ಆದರೆ ಮಕ್ಕಳು ನಂಬರ್ ಒನ್ ಆಗಿದ್ದಾರೆ.ಸೇಡಂ ತಾಲ್ಲೂಕಿನ ಅನೇಕ ಶಾಲೆಗಳಿಗೆ ಈ ಶಾಲೆಯು ಮಾದರಿಯಾಗಿದೆ ಎಂದೇ ಹೇಳಬಹುದು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ, ಊರಿನ ಮುಖಂಡರಾದ ಮಹಿಪಾಲ್ ದೊಡ್ಮನಿ, ಸಹ ಶಿಕ್ಷಕರು ಮತ್ತು ಮುದ್ದು ಮಕ್ಕಳು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




