ಮಲ್ಲಮ್ಮನ ಬೆಳವಡಿ: ಬೆಳಗಾವಿ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್. ಬೈಲಹೊಂಗಲ ಯೋಜನಾಕಚೇರಿಯ ವ್ಯಾಪ್ತಿಯ ದೊಡವಾಡ ವಲಯದ ಶಾಂತಿನಗರ ಕಾರ್ಯಕ್ಷೇತ್ರ ಶ್ರೀ ಗ್ರಾಮದೇವತೆ ಜ್ಞಾನವಿಕಾಸ ಕೇಂದ್ರದಲ್ಲಿ ಈ ದಿನ ಉಚಿತವಾಗಿ ಮೂರು ತಿಂಗಳ ಹೊಲಿಗೆ ತರಬೇತಿ ಕಾರ್ಯಗಾರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸಂಗೀತ ಮಡಿವಾಳಪ್ಪ ಚಂದರಗಿ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ವೀರೇಂದ್ರ ಸಂಗೋಳಿ, ತರಬೇತಿ ಟೀಚರ್ ಗೋರಿಮಾ, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶೈಲಾ J ಇವರ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ತರಬೇತಿ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಕುರಿತು ತಾಲೂಕಿನ ಜ್ಞಾನವಿಕಾಸ ಸಮನ್ವಧಿಕಾರಿಗಳಾದ ಶ್ರೀಮತಿ ಶೈಲಾ ಇವರು ಉಚಿತ ಹೊಲಿಗೆ ತರಬೇತಿಯನ್ನು ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಮಟ್ಟದ ಮಹಿಳೆಯರು ಮೂರು ತಿಂಗಳು ಉಚಿತ ತರಬೇತಿ ಪಡೆದು, ಸದೃಢ ಜೀವನಕೆ ಸ್ವ ಉದ್ಯೋಗ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು.ಪ್ರತಿ ಹೆಣ್ಣು ಮಕ್ಕಳು ಸ್ವ ಉದ್ಯೋಗ ಮಾಡುವ ಮೂಲಕ ಕುಟುಂಬದ ಆಧಾರವಾಗಬೇಕು. ಹಾಗೂ ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು ಇಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ತ್ರೀ ಯಾರನ್ನು ಆರ್ಥಿಕ ಸದೃಢ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆಯು ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಿದೆ ಇದರ ಉಪಯೋಗ ಪಡೆದುಕೊಳ್ಳಿರಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರತ್ನ ಸೋಬಾನದ, ಸ್ವಾಗತವನ್ನು ಗಂಗಮ್ಮ ಉಜ್ಜಿನಿ ಮಠ ಧನ್ಯವಾದಗಳನ್ನು ಅನ್ನಪೂರ್ಣ ಧಾರವಾಡ ನೆರವೇರಿಸಿದರು. ಈ ಸಂದರ್ಭದಲ್ಲಿ ಸವಿತಾ ಮೆನಸಿನಕಾಯಿ, ಸವಿತಾ ಇಂಚಲ್ ಸರ್ವ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಲಾಯಿತು.
ವರದಿ: ದುಂಡಪ್ಪ ಹೂಲಿ




