ನಿಪ್ಪಾಣಿ : ನೀರಾವರಿ ನಿಗಮ ಉತ್ತರ ವಲಯದಲ್ಲಿಇಂಜಿನಿಯರ್, ಸಹಾಯಕ ಇಂಜಿನಿಯರ್, ಕಿರಿಯಸ್ ಇಂಜಿನಿಯರ, ಸೇರಿ ತಾಂತ್ರಿಕ ವಿಭಾಗದಲ್ಲಿ ಅನೇಕರು ಮಹತ್ವದ ಕಾರ್ಯನಿರ್ವಹಿಸುತ್ತಾರೆ. ಆದರೆ ನೀರಾವರಿ ಇಲಾಖೆಯಲ್ಲಿ ಸದರಿ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇದ್ದು ಅವುಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕೆಂದು ಭೋಜ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರಾಜೇಂದ್ರ ಪವಾರ್ ವಡ್ಡರ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಅಗ್ರಹಿಸಿದ್ದಾರೆ. ಈ ಕುರಿತು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ಅಧಿಕ ಮಾಹಿತಿ ನೀಡಿದ ಅವರು ನೀರಾವರಿ ನಿಗಮ ಉತ್ತರ ವಲಯಕ್ಕೆ ಬರುವ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿಯ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಾಹಕ, ತಾಂತ್ರಿಕ ಸಹಾಯಕರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್, ಕೆರಿಯ ಎಂಜಿನಿಯರ್ ಭೂ ವಿಜ್ಞಾನ,ಸಿ ಗ್ರೂಪ್ ಹಾಗೂ ಡಿ ಗ್ರೂಪ್ ಹುದ್ದೆಗಳು ಸೇರಿ ಒಟ್ಟು 1322 ಹುದ್ದೆಗಳು ಈಗಾಗಲೇ ಮಂಜೂರಾಗಿದ್ದು ಇದರಲ್ಲಿ ಒಟ್ಟು 610 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು ಖಾಲಿ ಇರುವ 712 ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಿಕೊಳ್ಳಬೇಕೆಂದುಅಗ್ರಹಿಸಿದರು. ಈಗಾಗಲೇ ತಾಂತ್ರಿಕ ಶಿಕ್ಷಣ ಪಡೆದ ನಿರುದ್ಯೋಗಿ ಯುವಕರು ಅಧಿಕ ಸಂಖ್ಯೆಯಲ್ಲಿದ್ದು ಸದರಿ ಹುದ್ದೆಗಳನ್ನು ಭರ್ತಿ ಮಾಡಿದರೆ ನಿರುದ್ಯೋಗ ಸಮಸ್ಯೆಗೆ ಒತ್ತು ನಿಡಿದಂತಾಗುತ್ತದೆ. ಆದ್ದರಿಂದ ಆದಷ್ಟು ಬೇಗ ನೀರಾವರಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಗಳತಗಾ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದಗಡು ವಡ್ಡರ ಮಂಜುನಾಥ್ ಚೌಗುಲೆ, ಮಹೇಶ ಮಿಟಕೆ, ಅಶೋಕ ವಡ್ಡರ, ವಿನಾಯಕ ಸಪಕಾಳ, ಓಂಕಾರ ಪೋವಾರ, ರೋಹಿತ ಪೋವಾರ ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




