
ಬೈಲಹೊಂಗಲ: ಹೌದು ಕಿತ್ತೂರು ಕ್ಷೇತ್ರದ ಶಾಸಕರು ಆದ ಬಾಬಾ ಸಾಹೇಬ್ ಪಾಟೀಲರು ನಿನ್ನೆ ನೇಗಿನಹಾಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಿಜೆಪಿ ಮಕ್ಕಳು ಎಂಬ ಶಬ್ದ ಬಳಕೆಯಿಂದ ಆಕ್ರೋಶ ಗೊಂಡಿರುವ ಕಿತ್ತೂರು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇಂದು ಮಾಜಿ ಶಾಸಕರು ಮಹಾಂತೇಶ್ ದೊಡ್ಡ ಗೌಡರು, ಸಂಜಯ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಶ್ ಪಾಟೀಲ್, ನಾಯಕಿಯರಾದ ನಯನಾ ಬಸ್ಮೆ, ಲಕ್ಶ್ಮೀ ಇನಾಂದಾರ್, ಬಸವರಾಜು ಪರವಣ್ಣನವರ್, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮಾಣಿ ಸೇರಿದಂತೆ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಇಂದು ನೇಗಿನಹಾಳ ಶಾಸಕರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಸ್ವಾಭಿಮಾನಿ ಪಾದಯಾತ್ರೆ ಹಮ್ಮಿಕೊಂಡು ನೇಗಿನಹಾಳಕ್ಕೆ ಪ್ರವೇಶ ಮಾಡಲು ಹೋದಾಗ ಪೊಲೀಸರು ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿದರು.
ಒಟ್ಟಾರೆ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರಲ್ಲಿ ಈ ಮಕ್ಕಳ ಹೇಳಿಕೆ ಪಾಲಿಟಿಕ್ಸ್ ತುಂಬಾ ತಳಮಳ ಸೃಷ್ಟಿಸಿದೆ.
ವರದಿ: ಬಸವರಾಜು




