ಗಂಗಾವತಿ :ನಿನ್ನೆ 16 ರಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ಗಂಗಾವತಿ ಪಟ್ಟಣದಲ್ಲಿ ನಡೆದ ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯುವ ನಾಯಕರ ಜವಾಬ್ದಾರಿ ಪಕ್ಷದ ಬಲಿಷ್ಠ ಸಂಘಟನೆ ಮತ್ತು ನಿಷ್ಠಾವಂತರ ಕಾರ್ಯಕರ್ತರ ಅವಶ್ಯಕತೆ ಕುರಿತು ವಿಶೇಷವಾಗಿ ತಿಳಿಸಿ ಪಕ್ಷದ ಆದರ್ಶಗಳನ್ನು ಗ್ರಾಮಮಟ್ಟದಿಂದ ಜಿಲಾ ಮಟ್ಟದವರೆಗೆ ತಲುಪಿಸಲು ಪ್ರತಿಯೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂಬ ಸಂದೇಶ ನೀಡಿದರು.

ಈ ವೇಳೆ ಪದಗ್ರಹಣ ಸ್ವೀಕರಿಸಿದ ಎಲ್ಲಾ ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಸಂಸದರು.ಮಾಜಿ ಶಾಸಕರು.ಮತ್ತು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಶ್ರೀ ಮಂಜುನಾಥ ಗೌಡ.ಹಾಗೂ ಕೊಪ್ಪಳ ಜಿಲ್ಲೆ ಹಲವಾರು ಯುವ ನಾಯಕರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




