ಬೆಳಗಾವಿ: ನಗರದ ವಿವಿಧೆಡೆ ಗಾಂಜಾ ಮಾರಾಟ ಅಡ್ಡೆಗಳ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಖಡೇಬಜಾರ್, ಎಪಿಎಂಸಿ ಠಾಣೆಗಳ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿದ್ದಾರೆ.
ಹೊಸ ಗಾಂಧಿ ನಗರದ ಗುಲ್ದಾರ್ ಗಲ್ಲಿಯ ಆಸೀಫ್ ಹುಬಳಿಕರ(38) ಎಂಬಾತನನ್ನು ಬಂಧಿಸಿ, 12 ಸಾವಿರ ರೂ.ಮೌಲ್ಯದ 460ಗ್ರಾಂ ಗಾಂಜಾ, ಮೊಬೈಲ್, ದ್ವಿಚಕ್ರ ವಾಹನ, ನಗದು ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ ಎಪಿಎಂಸಿ ಆವರಣದ ಬಳಿ ಮಹಾರಾಷ್ಟ್ರದ ಗರಡಮಜಗಾಂವದ ನಾಗೇಶ ಭಗತ, ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ವಿನಾಯಕನನ್ನು ಬಂಧಿಸಿ 2,370 ರೂ.ಮೌಲ್ಯದ 250ಗ್ರಾಂ ಗಾಂಜಾ, ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ
ಗಾಂಜಾ ಮಾರಾಟ ಅಡ್ಡೆಗಳ ಮೇಲೆ ದಾಳಿ : ಮೂವರನ್ನು ಬಂಧನ




