ಆಷಾಡ ಮಾಸದ ಪುಣ್ಯ , ಸುಕ್ಷೇತ್ರ ಬೇಡರ ಬೂದಿಹಾಳ್ ಗ್ರಾಮದ ಸಾವಳಗೇಶ್ವರ ಮಠದಲ್ಲಿ
ಭಕ್ತಿಯಿಂದ ಪೂಜೆಯನ್ನ ನೆರವೇರಿಸಲಾಯಿತು. ಗ್ರಾಮದ ಹಿರಿಯರು, ಯುವಕರು ಸೇರಿ ಭಕ್ತರ ಸಹಕಾರದೊಂದಿಗೆ ಬುತ್ತಿ ರೊಟ್ಟಿ, ಹಳೆಯ ಕಾಲದ ರೀತಿಯಲ್ಲಿ ತಯಾರಾದ ಕಿಚಡಿ ಸಾಂಬಾರ ಸೇರಿದಂತೆ ವಿಶಿಷ್ಟ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಸ್ಥಳೀಯರ ತ್ಯಾಗಭಾವ ಹಾಗೂ ಶ್ರದ್ಧೆಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಕಲ್ಪಿಸಲಾಯಿತು. ಈ ಸಂದರ್ಭ ಮಠದವರ ಆಶೀರ್ವಚನಗಳೊಂದಿಗೆ, ಸಾಂಪ್ರದಾಯಿಕ ಭಕ್ತಿ ಭಾವನೆ ಮೆರೆದ ಕಾರ್ಯಕ್ರಮವಾಗಿ ಜನಮನ ಸೆಳೆಯಿತು.
ಸಂತೋಷ ಹಾಗೂ ಸಮರಸ್ಯತೆಯ ಸಂಭ್ರಮದಿಂದ ಮಠದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಯಿತು. ಭಕ್ತರು ಗಣಪತಿ ಭಜನೆ, ದಾಸ ಸಾಹಿತ್ಯದಲ್ಲಿ ತಲ್ಲೀನರಾಗಿದ್ದು, ಆಷಾಡ ಮಾಸದ ಪವಿತ್ರತೆಯನ್ನು ಅನುಭವಿಸಿದರು.
ವರಿದಿಗಾರರು s s ಕವಲಾಪುರೆ badami




