ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ರೈತರ ಬೆಳೆಗಳಿಗೆ ವಿತರಿಸುವ ರಾಸಾಯನಿಕ ಹಾಗೂ ರಸಗೊಬ್ಬರ ಬೆಲೆಯನ್ನು ಹೆಚ್ಚಳ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೊಳ್ಳೇಗಾಲದ ಪ್ರಮುಖ ರಸ್ತೆಗಳ್ಳಲಿ ಬಿಜೆಪಿ ಸರ್ಕಾರಕೆ ಹಾಗೂ ಪ್ರಧಾನ ಮಂತ್ರಿ ವಿರುದ್ಧ ದಿಕ್ಕಾರ ಕೂಗುತ್ತ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಕುರಿತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೇದ್ರ ಮಾತನಾಡಿ ಈ ಕೇಂದ್ರ ಸರ್ಕಾರದ ಅಧಿಕಾರ ಇಡಿದಿರುವ ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ರೈತ ಈ ದೇಶದ ಶಕ್ತಿ ಎಂದು ಮರೆತಿದೆ ಅದರಿಂದಾನೆ ರೈತರು ಉಪಯೋಗಿಸುವ ರಾಸಾಯನಿಕ ಹಾಗೂ ರಸಗೊಬ್ಬರಗಳ ಮೇಲೆ ಬೆಲೆಯನು ಹೆಚ್ಚಾಳಮಾಡಿದೆ ಇದನ್ನು ನಿಲ್ಲಿಸಬೇಕು ರೈತರಿಗೆ ಅನುಕೂಲವಾಗಿವಾ ರೀತಿಯಲ್ಲಿ ಮಾಡಬೇಕು ಬಿಜೆಪಿ ಸರ್ಕಾರ ಬರಿ ಬಡವರ, ರೈತರ, ಮೇಲೆ ತೆರಿಗೆ ರೀತಿಯಲ್ಲಿ ಸುಲಿಗೆ ಮಾಡುತ್ತಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೇಂದ್ರ ಸಿ ಉಪಾಧ್ಯಕ್ಷರಾದ ಸ್ಯೆದ್ ಮ್ಯೂಸೀಬ್ ಮಾಜಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ನಂಜುಡ ವಿಶ್ವ ಮಹದೇವಪ್ರಸಾದ್ ನಿಖಿಲ್ ಇರ್ಷಾದ್ ಹಾಗೂ ಅಸ್ಸೆಂಬಿಯ ಅಧ್ಯಕ್ಷರಾದ ದರ್ಶನ ಸೋಮಶೇಖರ್ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಕೊಳ್ಳೇಗಾಲ ಕ್ಷೇತ್ರದ ಅಧ್ಯಕ್ಷರಾದ ಶಿವರಾಜ್ ಮದ್ದೂರು, ಯಳಂದೂರು ಬ್ಲಾಕ್ ಅಧ್ಯಕ್ಷರಾದ ವಿಜಯ್, ಪ್ರದೀಪ್ ಅನಂತ್ ಹಾಗೂ ಯುವ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.




