ಸುಮಾರು 20 ವರ್ಷಗಳ ಕಾಲ ತಾಯಿ ಭಾರತಾಂಬೆಯ ಕಾವಲು ಮಾಡಿದ್ದ ಮಾಜಿ ಸೈನಿಕ
ಅಥಣಿ : ತಾಲೂಕಿನ ನಾಗನೂರ PA ಗ್ರಾಮದ ಮಾಜಿ ಯೋಧ ಲಕ್ಷ್ಮಣ ಬಾಬು ಮಗದುಮ್ಮ ಅನಾರೋಗ್ಯ ಹಿನ್ನೆಲೆ ಮಹಾರಾಷ್ಟ್ರದ ಪುಣೆ ಕಮಾಂಡೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾಗಿದ್ದಾರೆ.
ಸ್ವಗ್ರಾಮ ನಾಗನೂರ ಪಿ.ಎ ಗ್ರಾಮದಲ್ಲಿ ಇಂದು ಮಾಜಿ ಸೈನಿಕ, ಹಾಗೂ ರೈತ ಸಂಘದ ವತಿಯಿಂದ ವಿಧಿವಶನಾದ ಮಾಜಿ ಸೈನಿಕನಿಗೆ ಅಂತಿಮ ವಿದಾಯ ಹೇಳಿದ್ದಾರೆ.
ಮೃತ ಲಕ್ಷ್ಮಣ ಮಗದುಮ್ಮ್ ಇಪ್ಪತ್ತು ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಸೇವಾ ನಿವೃತ್ತಿ ನಂತರ ಸ್ವಗ್ರಾಮದಲ್ಲಿ ಕೃಷಿ ಕಾಯಕ ಮಾಡಿಕೊಂಡಿದ್ದರು. ಸ್ವಲ್ಪ ದಿನಗಳಿಂದಷ್ಟೇ ಹೃದಯ ಸಂಬಂದಿ ಕಾಯಿಲೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಾಜಿ ಯೋಧ ಕಳೆದ ಹದಿನೈದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ್ದು, ಸ್ವಗ್ರಾಮದಲ್ಲಿ ಅಂತಿಮ ಸಂಸ್ಕಾರ ನೇರವೇರಿದೆ.
20 ವರ್ಷಕಾಲ ಗಡಿಯಲ್ಲಿ ತಾಯಿ ಭಾರತಾಂಬೆಯ ಕಾವಲು ಮಾಡಿದ್ದ ಸೈನಿಕ ಹುಲಿ ಇಂದು ಮರೆಯಾಗಿದೆ.ಮಾಜಿ ಯೋಧನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇತ್ತ ಅಥಣಿ ಮಾಜಿ ಸೈನಿಕರ ಸಂಘ ಹಾಗೂ ರೈತ ಸಂಘ ಕಂಬನಿ ಮಿಡಿದಿದೆ.
ವರದಿ : ಅಬ್ಬಾಸ್ ಮುಲ್ಲಾ




