ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರವಾದ) ತಾಲೂಕು ಸಮಿತಿ ಚಿಂಚೋಳಿ ಇವರು ಮಾನ್ಯ ತಸಿಲ್ದಾರರ ಮೂಲಕ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ದಲಿತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಸಕ್ರಮವಾಗಿ ಮಾಡುವ ಸಲುವಾಗಿ ಪ್ರತಿಭಟನೆ ಮಾಡಲಾಯಿತು ಸುಮಾರು ವರ್ಷಗಳಿಂದ ದಲಿತರು ಭೂಮಿ ಉಳುಮೆ ಮಾಡುತ್ತಿದ್ದಾರೆ ಅಕ್ರಮ ಇರುವಂತಭೂಮಿ ಸಕ್ರಮವಾಗಿ ಮಾರ್ಪಾಡ ಮಾಡಬೇಕೆಂದು ತಹಸಿಲ್ದಾರ್ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುತ್ತೇವೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಸೋಮಶೇಖರ್ ಬೇಡಕಪಳ್ಳಿ ತಿಳಿಸಿದ್ದಾರೆ.
ವರದಿ: ಸುನಿಲ್ ಸಲಗರ




