Ad imageAd image

ಪೊಲೀಸರು ಸಮಾಜದ ಭದ್ರತಾ ಪ್ರತಿನಿಧಿಗಳು

Bharath Vaibhav
ಪೊಲೀಸರು ಸಮಾಜದ ಭದ್ರತಾ ಪ್ರತಿನಿಧಿಗಳು
A police badge shield star sheriff cop crest emblem or symbol motif
WhatsApp Group Join Now
Telegram Group Join Now

ಪೊಲೀಸರು ಸಮಾಜದ ಭದ್ರತಾ ಪ್ರತಿನಿಧಿಗಳು, ನಾಗರಿಕರ ಹಕ್ಕುಗಳ ರಕ್ಷಕರಾಗಿದ್ದಾರೆ. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಸ್ಥಾಪನೆ, ಅಪರಾಧಗಳ ತಡೆ ಹಾಗೂ ನಿರ್ಭಯತೆಯ ವಾತಾವರಣವನ್ನು ರೂಪಿಸುವುದು ಅವರ ಪ್ರಧಾನ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾರ್ವಜನಿಕರ ಬೆಂಬಲ ಮತ್ತು ನಿಕಟ ಸಹಭಾಗಿತ್ವ ಅತ್ಯವಶ್ಯಕ. ಪ್ರಸ್ತುತ ಪೊಲೀಸ್ ಸೇವೆಗಳು ಬಹುಪಾಲು “ಪ್ರತಿಕ್ರಿಯಾತ್ಮಕ ಸೇವೆ” ಆಗಿವೆ. ದೂರು ಬಂದ ತಕ್ಷಣವೇ ಪ್ರತಿಕ್ರಿಯೆಗಿಂತ, ಸಮಸ್ಯೆಗಳ ಮೊದಲೇ ಪರಿಹಾರ ಕಂಡುಕೊಳ್ಳುವ “ಸಕ್ರಿಯ ಸೇವೆ” (Pro-active policing) ಪದ್ಧತಿ ಅಗತ್ಯವಾಗಿದೆ. ಇದರಿಂದ ಸಮುದಾಯದೊಂದಿಗೆ ನಿಕಟ ಸಂಬAಧ ಬೆಳೆಸುವ ಮೂಲಕ, ವಿಶ್ವಾಸ ಮೂಡಿಸುವಂತಹ, ಮುನ್ನೆಚ್ಚರಿಕೆಯ ತಳಮಟ್ಟದ ಸೇವೆಗಳ ವ್ಯವಸ್ಥೆ ಸ್ಥಾಪನೆಗೊಳ್ಳುತ್ತದೆ.
“ಮನೆ-ಮನೆಗೆ ಪೊಲೀಸ್” ಯೋಜನೆಯ ಮೂಲಕ, ಪ್ರತಿಯೊಂದು ಮನೆಯವರೆಗೆ ಪೊಲೀಸ್ ಸಿಬ್ಬಂದಿಯು ತಲುಪಿ, ಅವರ ಸಮಸ್ಯೆಗಳನ್ನು ಆಲಿಸಿ, ಸಲಹೆ ಪಡೆಯುವುದು ಮತ್ತು ಭದ್ರತೆ ಸೃಷ್ಟಿಸುವುದು ಈ ಯೋಜನೆಯ ಮೂಲ ಗುರಿಯಾಗಿದೆ.
ಪ್ರಮುಖ ಕ್ರಮಗಳು:
• ಪೊಲೀಸ್ ಠಾಣೆ ವ್ಯಾಪ್ತಿಯನ್ನು ಇ-ಬೀಟ್ ಆಧಾರವಾಗಿ ವಿಂಗಡಿಸಿ, ಪ್ರತಿ 40-50 ಮನೆಗಳ ಸಮೂಹ ರಚನೆ.
• ಬೀಟ್ ಪೊಲೀಸ್ ಸಿಬ್ಬಂದಿಗಳು ನಿಯಮಿತವಾಗಿ ಎಲ್ಲಾ ಮನೆಗಳಿಗೆ ಭೇಟಿ ನೀಡುವುದು.
• ಮನೆಗಳಿಗೆ ಭೇಟಿ ವೇಳೆ ಸಾರ್ವಜನಿಕರಿಂದ ಮೌಖಿಕ/ಲಿಖಿತ ಅಹವಾಲು ಸ್ವೀಕರಿಸಿ, ಸೂಕ್ತ ಸ್ಪಂದನೆ ನೀಡುವುದು.
• ಮನೆಯ ಸುತ್ತಲಿನ ಭದ್ರತೆ ಪರಿಶೀಲನೆ ಮತ್ತು ಅಗತ್ಯ ಸಲಹೆ ನೀಡುವುದು.
• ಕುಟುಂಬದ ಸದಸ್ಯರೊಂದಿಗೆ ಸ್ನೇಹಭಾವ ಬೆಳೆಸುವುದು.
• ಎಲ್ಲಾ ಸಂಬಂಧಿತ ದೂರವಾಣಿ ಸಂಖ್ಯೆಗಳ ಪಟ್ಟಿ ಹಂಚುವುದು (ಠಾಣೆ, 112, ಹಿರಿಯ ಅಧಿಕಾರಿಗಳು).
• ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಈ ಮಾಹಿತಿಯ ಪ್ರದರ್ಶನ ಮಾಡುವುದು.
• ಮಹಿಳಾ ಪೊಲೀಸ್ ಸಿಬ್ಬಂದಿಗಳ ಸಕ್ರಿಯ ಪಾಲ್ಗೊಳ್ಳುವಿಕೆ, ವಿಶೇಷವಾಗಿ ಮಹಿಳಾ ಗೃಹಗಳಿಗೆ ಭೇಟಿ ನೀಡುವುದು.
• ಅಹವಾಲು / ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ವರದಿ ನೀಡುವುದು.
• ಸಮೂಹದ ಪ್ರತಿನಿಧಿಯನ್ನು every year rotationally ನೇಮಿಸಿ, ಸಮೂಹದೊಂದಿಗೆ ನಿಕಟ ಸಂಪರ್ಕ.
• ಸ್ಥಳೀಯ ಸಂಸ್ಥೆಗಳ ಜೊತೆ ಸಂಪರ್ಕ ಬೆಳೆಸಿ, ಪರಿಹಾರ ಕ್ರಮಗಳ ಅನುಷ್ಠಾನ.
• ಸೈಬರ್ ಅಪರಾಧ, ಮಾದಕ ವಸ್ತು, ಮಹಿಳೆಯರ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು.
• ಪೌರಾಡಳಿತದ ಸಹಕಾರದಿಂದ CCTV ಅಳವಡಿಸುವುದು.
• ಮಾದಕ ದ್ರವ್ಯಗಳ ವಿರುದ್ಧ ಸಾರ್ವಜನಿಕ ಮಾಹಿತಿಯ ಆಧಾರವಾಗಿ ಕ್ರಮ.
• ಧಾರ್ಮಿಕ ಸ್ಥಳಗಳ ಭದ್ರತೆ ನಿಗಾ ವಹಿಸುವುದು.
• ಅಪರಾಧ ಚಟುವಟಿಕೆಗಳ ಕುರಿತು ನಿಗಾ ಮತ್ತು ಒಂಟಿ ವ್ಯಕ್ತಿಗಳಿಗೆ ವಿಶೇಷ ಸಹಾಯ.
• ಪ.ಜಾ./ಪ.ಪಂ. ಸಮುದಾಯದ ಹಕ್ಕುಗಳ ರಕ್ಷಣೆ.
• ಅಪಘಾತ ಪ್ರದೇಶ/ಸ್ಥಳಗಳ ಮೇಲೆ ಕ್ರಮ.
• ಕಾನೂನು ಸಲಹೆ, ಸಹಾಯ ಒದಗಿಸುವ ಭರವಸೆ.
• ಸಾರ್ವಜನಿಕರ ವಿಶ್ವಾಸ ಮೂಡಿಸುವ ಕಾರ್ಯಚಟುವಟಿಕೆ.
• ಮನೆಗಳಲ್ಲಿ ಪಡೆದ ಅಹವಾಲುಗಳ ದಾಖಲಾತಿ ನಿರ್ವಹಣೆ.
• ಪ್ರತಿ ಮಾಹೆಯ ಎರಡನೇ ಶನಿವಾರ ಸಾರ್ವಜನಿಕ ಸಭೆ ಮಾಡುವುದು.
• ಉತ್ತಮ ಸಲಹೆಗಾರರಿಗೆ “ಅತ್ಯುತ್ತಮ ಪೊಲೀಸ್ ಸಲಹೆಗಾರ” ಹಾಗೂ “ಅತ್ಯುತ್ತಮ ಪೊಲೀಸ್ ಸ್ನೇಹಿತ” ಪ್ರಶಸ್ತಿ.
• ಸಾರ್ವಜನಿಕರ ವೈಯಕ್ತಿಕ/ಸಾಂಸ್ಕೃತಿಕ ಮಾಹಿತಿಯ ಸಂಗ್ರಹ ಹಾಗೂ ಭೇದಭಾವ ತೀವ್ರವಾಗಿ ನಿಷಿದ್ಧ.
ಮನೆ ಮನೆಗೆ ಪೊಲೀಸ್ ಉಪಕ್ರಮದ ಯಶಸ್ವಿ ಅನುಷ್ಠಾನದಿಂದ ಸಾರ್ವಜನಿಕರೊಂದಿಗೆ ಪೊಲೀಸರ ನಡುವಿನ ಸ್ನೇಹಪರ ಹಾಗೂ ವಿಶ್ವಾಸಪಾತ್ರ ಸಂಬಂಧಗಳು ಬೆಳೆದು ಬರುತ್ತವೆ.

ಇದರಿಂದ ಸ್ಥಳೀಯ ಮಟ್ಟದಲ್ಲಿ ಸೂಕ್ಷ್ಮ ಮಾಹಿತಿ ಪಡೆಯಲು, ಅಪರಾಧಗಳನ್ನು ತಡೆಗಟ್ಟಲು ಮತ್ತು ದಾಖಲಾದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಸಹಾಯವಾಗುತ್ತದೆ. ಈ ರೀತಿಯ ಸಮಾಜಸ್ನೇಹಿ ಪೊಲೀಸ್ ವ್ಯವಸ್ಥೆಯು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಿ, ಇಲಾಖೆಯನ್ನು ಜನಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಹಾಗೂ ಪರಿಣಾಮಕಾರಿ ಪೊಲೀಸ್ ಸೇವೆ ನೀಡಲು ನೆರವಾಗುತ್ತದೆ.

ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!