Ad imageAd image

ಭೂಮಿ ವಸತಿ ಹಕ್ಕಿಗಾಗಿ ಪ್ರತಿಭಟನೆ

Bharath Vaibhav
ಭೂಮಿ ವಸತಿ ಹಕ್ಕಿಗಾಗಿ ಪ್ರತಿಭಟನೆ
WhatsApp Group Join Now
Telegram Group Join Now

ಸಿಂಧನೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಜುಲೈ 18 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕ ಸಮಿತಿ ಮಸ್ಕಿ ಮಾನ್ಯ ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಭೂಮಿ ಒಂದು ಉತ್ಪಾದನಾ ಸಾಧನವಾಗಿದೆ ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ ವೈದಿಕ ಧರ್ಮ ಅರ್ಥಾತ್ ಬ್ರಹ್ಮಣ ಧರ್ಮ ತಲತಲಾಂತರ ಗಳಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದೆ ಸ್ವಾತಂತ್ರ್ಯ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಂದೋಲನದಿಂದಾಗಿ ದಲಿತ- ದಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಹ್ಮಣಶಾಹಿ ಬಂಡವಾಳಶಾಹಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಹಾಗೂ ದಲಿತರ ಭೂಮಿ ವಸತಿ ಹಕ್ಕು ಮತ್ತು ಇತರೆ ಹಕ್ಕೂತ್ತಾಯಗಳಿಗೆ ಆಗ್ರಹಿಸಿ 18 ಜೂಲೈ 2025 ರಂದು ಪ್ರಥಮ ಅಂತವಾಗಿ ಮಸ್ಕಿ ತಾಲೂಕ ಕಛೇರಿ ಮುಂದೆ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಪ್ರತಿಭಟನ ಧರಣಿ ಹಮ್ಮಿಕೊಳ್ಳಲಾಗಿದೆ ಸರ್ಕಾರದ ಮುಂದಿನ ನಡೆ ಗಮನಿಸಿ ಮುಂದಿನ ಹೋರಾಟವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮನವಿ ಪತ್ರ ಸಲ್ಲಿಸಲಾಯಿತು.

ಸಂದರ್ಭದಲ್ಲಿ  ವಿಭಾಗೀಯ ಸಂಚಾಲಕ ಚಿನ್ನಪ್ಪ ಹೆಡಗಿಬಾಳ ಕ್ಯಾಂಪ್, ಜಿಲ್ಲಾ ಸಂಚಾಲಕ ಆರ್. ಅಂಬ್ರುಸ್ ಕೊಡ್ಲಿ, ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಎಂ. ಕೊಠಾರಿ, ತಾಲೂಕ ಉಪ ಸಂಚಾಲಕರಾದ. ಚಂದಪ್ಪ ಹಾಲಾಪುರ, ನಾಗಪ್ಪ ದೀನಸಮುದ್ರ, ರವಿರಾಜ್ ಬೆನಕನಾಳ, ದೇಶಪ್ಪ ಪಾಂಡುರಂಗ ಕ್ಯಾಂಪ್, ಬಸವರಾಜ ಎದ್ದಲದಿನ್ನಿ, ವಿಜಯಕುಮಾರ್ ಹೂವಿನಬಾವಿ, ಭೀಮೇಶ್ ಗುಡದೂರು, ನಿರುಪಾದಿ,ಮರಿಸ್ವಾಮಿ ಇನ್ನು ಅನೇಕರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!