ಸಿಂಧನೂರು: ಜುಲೈ ೧೮ ರಂದು ನಮ್ಮ ಕರ್ನಾಟಕ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ ಅವರ ನೇತೃತ್ವದಲ್ಲಿ ರಾಯಚೂರಿನ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಕಛೇರಿಯಲ್ಲಿ ಸಭೆ ಸೇರಿ ಸಿಂಧನೂರು ಅಂಬಿರಾಜ್ ಮ್ಯಾಕಲ್ ಅವರನ್ನು ಸೇನೆಗೆ ನೂತನ ತಾಲೂಕ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಪ್ರತಿ ನೀಡಲಾಯಿತು ಎಂದು ಜಿಲ್ಲಾ ಘಟಕ ಅಧ್ಯಕ್ಷ ಕೊಂಡಪ್ಪ ಕೆ. ತಿಳಿಸಿದರು.
ನಂತರ ನಮ್ಮ ಕರ್ನಾಟಕ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ ಯವರು ಮಾತನಾಡಿ ಜಿಲ್ಲಾ ಮತ್ತು ಮತ್ತು ತಾಲೂಕ ಮಟ್ಟದಲ್ಲಿ ನಮ್ಮ ಕರ್ನಾಟಕ ಸೇನೆ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಜೊತೆಗೆ ಸಾಮಾಜಿಕ ಕಳವಳಿಯೊಂದಿಗೆ ನೆಲ ಜಲ ನಾಡು-ನುಡಿಗಾಗಿ ಅಲ್ಲದೆ ಸಾಮಾಜಿಕ ಸೇವೆಯೊಂದಿಗೆ ಸಂಘದ ಶ್ರೇಯಾಭಿವೃದ್ಧಿಯಲ್ಲಿ ಮುನ್ನಡೆಯಬೇಕು ಮತ್ತು ರಾಜ್ಯದ ಗ್ರಾಮೀಣ ಭಾಗದಲ್ಲಿ ಆಕ್ರಮ ಶಾಲೆಗಳು ಹಾಗೂ ಆಕ್ರಮ ಮಧ್ಯ ಮಾರಾಟ ಹೆಚ್ಚಾಗಿದ್ದು ಅವುಗಳನ್ನು ತಡೆಗಟ್ಟವಲ್ಲಿ ಪರಿಣಾಮಕಾರಿಯಾಗಿ ಹೋರಾಟಗಳನ್ನು ಮಾಡಬೇಕಾಗಿದೆ ಎಂದರು.
ನೂತನ ತಾಲೂಕು ಘಟಕ ಅಧ್ಯಕ್ಷ ಅಂಬಿ ರಾಜ್ ಮ್ಯಾಕಲ್ ಮಾತನಾಡಿ ಪಡಕೋಟೆ ಸರ್ ಅವರು ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ನಮ್ಮ ಕರ್ನಾಟಕ ಸೇನೆಗೆ ಸಿಂಧನೂರು ತಾಲೂಕ ಅಧ್ಯಕ್ಷನಾಗಿ ಮಾಡಿ ಆದೇಶ ಪ್ರತಿ ನೀಡಿದ್ದಾರೆ ಸಂಘಟನೆಗೆ ಕೆಟ್ಟ ಹೆಸರು ತರದೆ ಕನ್ನಡ ನೆಲ ಜಲ ಭಾಷೆ ಸಂಸ್ಕೃತಿ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ ಕನ್ನಡ ನಾಡು ನುಡಿಗಾಗಿ ಹಗಲಿರಳು ಶ್ರಮಿಸುತ್ತೇನೆ ಹಾಗೂ ಜಿಲ್ಲಾ ಘಟಕ ಅಧ್ಯಕ್ಷ ಕೊಂಡಪ್ಪ ಕೆ. ಸರ್ ಅವರ ನೇತೃತ್ವದಲ್ಲಿ ನಗರ ಘಟಕ ಹೋಬಳಿ ಘಟಕ ಗ್ರಾಮ ಘಟಕ ಪದಾಧಿಕಾರಿಗಳ ನೇಮಕ ಮಾಡುವಲ್ಲಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಸಂಚಾಲಕ ಹುಸೇನ್ ಬಾಷಾ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಾಫರ್, ಗನಿಪಾಷ, ಮುನ್ನ, ಸಿದ್ದಣ್ಣ, ಶಾಬಾಜ್, ಮೌನೇಶ್, ಇನ್ನು ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




