Ad imageAd image

ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Bharath Vaibhav
ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
WhatsApp Group Join Now
Telegram Group Join Now

ಅಥಣಿ: ಗುರುವಾರ ೧೭ರಂದು ಸಂಜೆ ಇಲ್ಲಿಯ ರಾಯಲ್ ಹಾಲ್‌ದಲ್ಲಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆವಹಿಸಿ ರೋಟರಿ ಸಂಸ್ಥೆಯ ಅಥಣಿಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡುತಾ ಇಂದು ಆರೋಗ್ಯದ ಕಾಳಜಿವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಸಮಾಜಮುಖಿಯಾಗಿ ಅಥಣಿ ತಾಲೂಕಿನಲ್ಲಿ ಕಳೇದ ೨೮ವರ್ಷಗಳಿಂದ ನೂರಾರು ಕಾರ್ಯಕ್ರಮಗಳ ಮೂಲಕ ಎಲ್ಲ ವರ್ಗದ ಜನರಿಗೆ ನೆರವಾಗಿದೆ ಅದರಂತೆ ದಿನದಿಂದ ದಿನಕ್ಕೆ ರೋಗಗಳು ಹೆಚ್ಚಾಗುತ್ತಿವೆ ಹೀಗಾಗಿ ಜನರಿಗೆ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ಅನುಕೂಲವಾಗಲೆಂದು ರೋಟರಿ ಸಂಸ್ಥೆ ಡಯಾಲಿಸಿಸ್‌ ಸೆಂಟರ ಆರಂಭವಾಗಲಿದೆ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ರೋಟರಿ ಉದ್ಯಾನವನ ಸ್ಥಾಪಿಸಿ ಅಲ್ಲಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನ ಅಳವಡಿಸಿ ಉತ್ತಮ ಪರಿಸರ ಜತೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೆಮ್ಮದಿ,ಸಮಾಧಾನ ದೊರೆಯುವಂತೆ ಸಸಿಗಳನ್ನ ನೆಡಲಾಗಿದೆ ಎಂದರು.

ಮುಖ್ಯ ಅತಿಥಿ ರೋಟರಿ ಪ್ರಾಂತಪಾಲ ಬಾಗಲಕೊಟೆಯ ಡಾ.ಗಿರೀಶ ಮಾಸೂರಕರ ಮಾತನಾಡಿ ಸಮಾಜದ ಋಣ ತೀರಿಸಲು ರೋಟರಿ ಸಂಸ್ಥೆಯು ದೊಡ್ಡ ವೇದಿಕೆ ಕಲ್ಪಿಸಿದೆ ಏಕೆಂದರೆ ತಂದೆ,ತಾಯಿ,ಗುರು,ಭೂಮಿ ಋಣ ತೀರಿಸಲು ಅಸಾಧ್ಯ ಆದರೆ ಸಮಾಜದ ಋಣ ತೀರಿಸಲು ರೋಟರಿಯಲ್ಲಿ ಸಾಧ್ಯವಿದೆ ಎಂದ ಅವರು ಬಡ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರಿಗೆ ನೆರವಾಗಲು ಸಾಕಷ್ಟು ಕಾರ್ಯಕ್ರಮಗಳು ರೋಟರಿಯಿಂದ ನೆರವರುತ್ತಿವೆ ಆಥಣೆ ರೋಟರಿ ಸಂಸ್ಥೆ ೨೮ವರ್ಷಗಳಿಂದ ಅತ್ಯಂತ ಸಮಾಜಮುಖಿ ಸೇವೆಯ ಮೂಲಕ ಜಿಲ್ಲೆಗೆ ಹೆಸರುವಾಸಿಯಾಗಿದೆ ಎಂದರು.

ಮಿರಜದ ವೈಧ್ಯೆ ಡಾ.ಮೊನಿಕಾ ಕುಳೋಳ್ಳಿ ಮಾತನಾಡಿ ಪುರುಷರೊಂದಿಗೆ ಇಂದು ಮಹಿಳೆಯರು ಕೂಡ ಇನ್ನರವಿಲ್ ಕ್ಲಬ್ ಮೂಲಕ ಸಮಾಜಸೇವೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಇದರಿಂದ ಧೈರ್ಯ, ಉತ್ಸಾಹ, ಮಾತನಾಡುವ ಕಲೆ ಬೆಳೆಯುತ್ತದೆ ರೋಟರಿ ಕ್ಲಬ್‌ ಜತೆಗೆ ಉತ್ತಮ ಸಹಕಾರದಿಂದ ಹೆಚ್ಚಿನ ಕಾರ್ಯಗಳು ಆಗಲಿ ಎಂದರು.

ನೂತನ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಸಚೀನ ದೇಸಾಯಿ, ಕಾರ್ಯದರ್ಶಿಯಾಗಿ ಶೇಖರ ಕೊಲಾರ ಮತ್ತು ಖಜಾಂಚಿಯಾಗಿ ಸಂತೋಷ ಬೊಮ್ಮಣ್ಣನವರ ಪದಗ್ರಹಣ ಮಾಡಿದರೆ ಇನ್ನರವಿಲ್ಲ ಕ್ಲಬ್ ನೂತನ ಅಧ್ಯಕ್ಷೆಯಾಗಿ ಸುನಿತಾ ದೇಸಾಯಿ,ಕಾರ್ಯದರ್ಶಿಯಾಗಿ ಶೋಭಾ ಕೊಲಾರ ಮತ್ತು ಖಜಾಂಚಿಯಾಗಿ ರಶ್ಮಿ ಬೊಮ್ಮಣವರ,ಭಾರತಿ ಕೊರೆ ಪದಗ್ರಹಣ ಮಾಡಿದರು.

ನೂತನ ಸದಸ್ಯರಾಗಿ ಡಾ.ರವಿ ಪಾಂಗಿ,ಡಾ.ಶುಭಂ ಪಾಟೀಲ.ಡಾ.ರಾಹುಲ ಭೋಸಲೆ, ಶ್ರೀಕಾಂತ ಅಥಣಿ, ಪ್ರಭಾಕರ ಹತ್ತಿ,ಆನಂದ ಟೊನಪಿ,ಅಶೋಕ ಹೊಸೂರ, ಮಹೇಶ ಹಿರೇಮಠ ಅವಿನಾಶ ಜಾಧವಸುನಿಲ ಪ್ರವಾರದೇಸಾಯಿ ಸದಸ್ಯತ್ವ ಪಡೆದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!