Ad imageAd image

ನೂತನ ಅಧ್ಯಕ್ಷರಾಗಿ ವಿ.ಆರ್.ಉಮೇಶ್ ರೋಟರಿಯಿಂದ ಅಶಕ್ತರ ಸೇವೆ ಶ್ಲಾಘನೀಯ : ಡಾ.ಅಭಿನವ ಶ್ರೀಗಳು

Bharath Vaibhav
ನೂತನ ಅಧ್ಯಕ್ಷರಾಗಿ ವಿ.ಆರ್.ಉಮೇಶ್ ರೋಟರಿಯಿಂದ ಅಶಕ್ತರ ಸೇವೆ ಶ್ಲಾಘನೀಯ : ಡಾ.ಅಭಿನವ ಶ್ರೀಗಳು
WhatsApp Group Join Now
Telegram Group Join Now

ತುರುವೇಕೆರೆ : ಜನಮಾನಸಕ್ಕೆ ಹತ್ತಿರವಾಗಿರುವ ರೋಟರಿ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವಾಕಾರ್ಯಗಳಿಂದ ಖ್ಯಾತಿ ಪಡೆದಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಅಶಕ್ತರ, ಅಸಹಾಯಕರ ನೆರವಿಗಾಗಿ ನೂರಾರು ಯೋಜನೆಗಳನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ವಿಶ್ವದರ್ಜೆಯ ಸಂಘಟನೆಯಲ್ಲಿ ತುರುವೇಕೆರೆ ತಾಲೂಕಿನವರೂ ಸದಸ್ಯರಾಗಿ ಸಂಘಟನಾತ್ಮಕವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ತುರುವೇಕೆರೆ ರೋಟರಿ ಕ್ಲಬ್ ಕಳೆದೊಂದು ದಶಕದಿಂದ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕ್ಲಬ್ ಕಾರ್ಯಯೋಜನೆಗಳಿಂದ ಸಹಸ್ರಾರು ಮಂದಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷ ಉಮೇಶ್ ಹಾಗೂ ತಂಡದಿಂದ ಮತ್ತಷ್ಟು ಜನಪರ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.

ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಎಲಿಜಬೆತ್ ಚೆರಿಯನ್ ಮಾತನಾಡಿ, ರೋಟರಿ ಈ ವರ್ಷ ಸೇವೆಯ ಜೊತೆಗೆ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಬಗ್ಗೆ ಅಭಿಯಾನವನ್ನು ನಡೆಸಲಿದೆ. ರೋಟರಿ ಸದಸ್ಯರಿಗೆ ಮಾತ್ರವಲ್ಲದೆ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡುವ ಮೂಲಕ ಕನ್ನಡ ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡಲಿದೆ ಎಂದರು.

ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾದರೂ ಸಹ ಈ ವರ್ಷ ರೋಟರಿ ಸಂಸ್ಥೆಯ ಕಾರ್ಯಕ್ರಮಗಳು ಕನ್ನಡಮಯವಾಗಿರಲಿದೆ. ಕನ್ನಡದಲ್ಲಿಯೇ ಪ್ರತಿ ಚಟುವಟಿಕೆಯೂ ರೂಪುಗೊಳ್ಳಬೇಕು, ಕನ್ನಡತನ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ರಾರಾಜಿಸಬೇಕೆಂಬ ಅಭಿಲಾಷೆ ನನ್ನದಾಗಿದೆ. ಕನ್ನಡ ನಾಡು ನಮಗೆ ಎಲ್ಲವನ್ನೂ ನೀಡಿದೆ. ಕನ್ನಡ ನಾಡಿನ ಋಣ ತೀರಿಸುವುದಕ್ಕೆ ಸಾಧ್ಯವಿಲ್ಲ. ಮುಂದಿನ ಜನ್ಮವಿದ್ದರೂ ಕನ್ನಡ ನಾಡಿನಲ್ಲಿ ಹುಟ್ಟುವ ಆಸೆ ನನಗಿದೆ. ಕನ್ನಡ ಕೇವಲ ಆಡುಭಾಷೆಯಲ್ಲ, ಅದು ನಮ್ಮ ಮಾತೃಭಾಷೆ, ಮನೆಮನದ ಭಾಷೆ, ಪ್ರತಿಯೊಬ್ಬರ ಮನಸ್ಸು, ಮನೆಯು ಕನ್ನಡತನದಿಂದ ಮೇಳೈಸಬೇಕಿದೆ ಎಂದರು.

ರೋಟರಿ ಕ್ಲಬ್ ನೂತನ ಅಧ್ಯಕ್ಷ ವಿ.ಆರ್.ಉಮೇಶ್ ಮಾತನಾಡಿ, ರೋಟರಿ ಸಂಸ್ಥೆಯ 11 ನೇ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿರುವುದು ಸಂತಸ ತಂದಿದೆ. ಸಂಸ್ಥೆಯ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಮೊದಲ ದಿನವೇ 11 ಸೇವಾ ಚಟುವಟಿಕೆಗಳನ್ನು ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ನಿಕಟಪೂರ್ವ ಅಧ್ಯಕ್ಷರು, ಸದಸ್ಯರುಗಳ ಸಹಕಾರದೊಂದಿಗೆ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸುವ ಆಶಯ ಹೊಂದಿದ್ದೇನೆ. ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಯಾಗಿ ಕಲಿತು ಬಂದ ನನಗೆ ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಯ ಅರಿವಿದೆ. ಈ ನಿಟ್ಟಿನಲ್ಲಿ ನನ್ನ ಅವಧಿಯಲ್ಲಿ ತಾಲೂಕಿನ ಸರ್ಕಾರಿ ಕನ್ನಡ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣಬದ್ಧನಾಗಿ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಪೌರಕಾರ್ಮಿಕರಿಗೆ ಜರ್ಕಿನ್, ಬಿಪಿ, ಶುಗರ್ ಮಿಷನ್ ವಿತರಣೆ, ಬಾಡಿ ಫ್ರೀಜರ್, ಶಾಲೆಗೆ ಅಲ್ಮೇರಾ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, 10 ನೇ ತರಗತಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರೋಟರಿ ಸಂಸ್ಥೆಗೆ ಹೊಸದಾಗಿ 21 ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತ, ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಉಮೇಶ್, ಸಹಾಯಕ ಜಿಲ್ಲಾಪಾಲಕ ಜನಾರ್ಧನ್, ವಲಯ ಅಂಬಾಸಿಡರ್ ಪ್ರಸನ್ನಕುಮಾರ್, ವಲಯ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಕಾನ್ಪರೆನ್ಸ್ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ನೂತನ ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್ ಸೇರಿದಂತೆ ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!