
ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್ ಗಳ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಬಲದ ಬಗ್ಗೆ ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಕರುಣ್ ನಯ್ಯರ ಬ್ಯಾಟಿಂಗ್ ಬಗ್ಗೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟಗಾರ ಫಾರುಕ್ ಇಂಜನೀಯರ್ ನಿರಾಶೆ ವ್ಯಕ್ತಪಡಿಸಿದ್ದಾರೆ.
ಕರುಣ್ ನಯ್ಯರ ಬ್ಯಾಟಿಂಗ್ ಗಮನಿಸಿದಾಗ ಅವರು ಫಾರ್ಮ್ ನಲ್ಲಿರುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಸುಂದರ 30 ರನ್ ಆಕರ್ಷಕ 40 ರನ್ ಗಳು ಬ್ಯಾಟಿನಿಂದ ಹರಿದು ಬಂದಿವೆ. ಸುಂದರ್ ಕವರ್ ಡ್ರೈವ್ ಗಳನ್ನು ನೋಡಲಾಗಿದೆ. ಆದರೆ ಮೂರನೇ ಕ್ರಮಾಂಕದ ಆಟಗಾರನಿಂದ ಇಷ್ಟನ್ನು ಮಾತ್ರ ನಿರೀಕ್ಷಿಸಲಾಗದು. ಅವರಿಂದ ಆಕರ್ಷಕ ಶತಕವೂ ಮೂಡಿ ಬರಬೇಕು ಎಂದು ಫಾರುಕ್ ಇಂಜನೀಯರ್ ಹೇಳಿದ್ದಾರೆ.




