Ad imageAd image

ಮಠದಿಂದ ಜಯ ಮೃತ್ಯುಂಜಯ ಶ್ರೀಗಳನ್ನ ಹೊರಹಾಕಲು ಚಿಂತನೆ : ವಿಜಯಾನಂದ ಕಾಶಪ್ಪನವರ್

Bharath Vaibhav
ಮಠದಿಂದ ಜಯ ಮೃತ್ಯುಂಜಯ ಶ್ರೀಗಳನ್ನ ಹೊರಹಾಕಲು ಚಿಂತನೆ : ವಿಜಯಾನಂದ ಕಾಶಪ್ಪನವರ್
WhatsApp Group Join Now
Telegram Group Join Now

ಹುಬ್ಬಳ್ಳಿ : ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಪಂಚಮಸಾಲಿ ಮಠಕ್ಕೆ ಬೀಗ ಹಾಕಿರುವ ವಿಚಾರವಾಗಿ ಇಂದು ಹುಬ್ಬಳ್ಳಿಯಲ್ಲಿ ಶಾಸಕ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ ಕೂಡಲಸಂಗಮದ ಪಂಚಮಸಾಲಿ ಮಠದಿಂದ ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಿಂದ ಜಯಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಟ್ರಸ್ಟ್ ಚಿಂತನೆ ನಡೆಸುತ್ತಿದೆ.

ಕೂಡಲಸಂಗಮಪೀಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸ್ವಾಮೀಜಿ ಒಂದು ಪಕ್ಷದ ಬ್ಯಾನರ್ ಅಡಿ ಹೋಗಿ ಕೋರುತ್ತಿದ್ದಾರೆ ಓರ್ವ ವ್ಯಕ್ತಿಯ ಪರವಾಗಿ ಮಾತ್ರ ಸ್ವಾಮೀಜಿ ಮಾತನಾಡುತ್ತಿದ್ದಾರೆ.

ಜಯ ಮೃತ್ಯುಂಜಯ ಸ್ವಾಮೀಜಿ ನಡವಳಿಕೆ ಬದಲಾವಣೆ ಆಗಿದ್ದು ಸತ್ಯ ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದೌರ್ಜನ್ಯ ನಡೆದಿದೆ.

ಅಲ್ಲಿ ಹೋಗಿ ಸ್ವಾಮೀಜಿಗೆ ಯಾರಿಗೂ ಸ್ವಾಗತ ಹೇಳಿಲ್ಲ ಬಸವ ಜಯಂತಿಯ ಸ್ವಾಮೀಜಿ ಪ್ರಚಾರ ಪ್ರಿಯ ಆಗಿದ್ದಾರೆ ದಿನಾಲು ಮುಂಜಾನೆ ಎದ್ದರೆ ಬರುತ್ತಾರೆ ಎಂದು ಆರೋಪಿಸಿದರು.

ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಪರ್ಯಾಯ ವ್ಯವಸ್ಥೆಯಲ್ಲಿ ಓರ್ವ ಗುರುಗಳನ್ನು ನಿರ್ಮಿಸುವುದು ಸತ್ಯ. ಜಯ ಮೃತುಂಜಯನ್ನು ಹೊರಹಕಾಲು ಸ್ವಾಮೀಜಿ ಚಿಂತನೆ ನಡೆಸುತ್ತಿದೆ. ಮಠಕ್ಕೆ ಮಾಲೀಕರು, ಸ್ವಾಮೀಜಿ ಅಲ್ಲ ನಮ್ಮ ಟ್ರಸ್ಟ್ ಮಠವನ್ನು ನೋಡಿಕೊಳ್ಳುವಂತೆ ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಿದ್ದೆವು.

ಮಠ ನೀಡಿದ್ದು ಧರ್ಮ ಪ್ರಚಾರ ಮತ್ತು ಸಂಘಟನೆಗೆ ಮಾತ್ರ ಅದು ಬಿಟ್ಟು ಮನೆ ಅಂತ್ಯ ಮಾಡಿಕೊಂಡು ಓಡಾಡುವುದು ಸರಿಯಲ್ಲ.ಸ್ವಾಮೀಜಿ ಬೆಳಗಾವಿ ಮತ್ತು ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆ ಮಾಡಿದ್ದಾರೆ.

ಸ್ವತಹ ಸ್ವಾಮೀಜಿ ಮಲಪ್ರಭಾ ನದಿಯ ಮೇಲೆ ಮಠ ಕಟ್ಟುವದಾಗಿ ಹೇಳಿದ್ದಾರೆ ಕೆಲ ಅಗ್ರಗಣ್ಯ ನಾಯಕರು ಕೂಡ ಹೇಳಿದ್ದಾರೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಾನಂದ ಕಾಶಪ್ಪನವರ್ ಹರಿ ಹಾಯ್ದರು.

ಇದೆ ವೇಳೆ ಪಂಚಮಸಾಲಿ ಪೀಠದ ಸ್ವಾಮೀಜಿ ಮತ್ತು ಟ್ರಸ್ಟ್ ನಡುವೆ ಗುದ್ದಾಟದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮುಖಂಡ ನೀಲಕಂಠ ಅಸೂಟಿ ಹೇಳಿಕೆ ನೀಡಿದ್ದು, ಬಸವ ಜಯಂತಿಯ ಸ್ವಾಮೀಜಿ ಪೀಠದಲ್ಲಿ ಇರುತ್ತಿರಲಿಲ್ಲ.

ಎರಡು ವರ್ಷದಿಂದ ಕೂಡಲಸಂಗಮ ಮಠಕ್ಕೆ ಸ್ವಾಮೀಜಿ ಬಂದೇ ಇಲ್ಲ. ಮಠಕ್ಕೆ ಬಂದು ವಾಸ್ತವ್ಯ ಮಾಡಿ ಅಂತ ಅನೇಕ ಬಾರಿ ನಾವು ಹೇಳಿದ್ದೆವು. ಯಾರು ಇಲ್ಲದಿದ್ದಾಗ ಬೇರೆ ಬೇರೆ ಚಟುವಟಿಕೆ ನಡೆಯುತ್ತಿದ್ದವು. ಹೀಗಾಗಿ ಪೀಠಕ್ಕೆ ಬೀಗ ಹಾಕಲು ಟ್ರಸ್ಟ್ ನಿರ್ಧಾರ ಕೈಗೊಂಡಿತ್ತು.

ಆದರೆ ಏಕಾಏಕಿ ಹೋಗಿ ಪೀಠದವಾಗಿಲು ಮುರಿದಿದ್ದಾರೆ. ನಿತ್ಯ ಅಲ್ಲಿ ಇದ್ದಿದ್ದರೆ ಮಠಕ್ಕೆ ಬೀಗ ಹಾಕುವ ಪ್ರಶ್ನೆಯೇ ಬರುತ್ತಿರಲಿಲ್ಲ. ಸ್ವಾಮೀಜಿ ಮಾಡಬಾರದ ಕೆಲಸ ಮಾಡಬಾರದು ಅಂತ ಹೇಳಿದ್ದೆವು.

2019ರಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ನೋಟಿಸ್ ನೀಡಿದ್ದೆವು. ಸರಿ ಪಡಿಸಿಕೊಂಡು ಹೋಗುತ್ತೇನೆ ಅಂತ ಸ್ವಾಮೀಜಿ ಕೂಡ ಪತ್ರ ಬರೆದಿದ್ದರು. ಆದರೂ ಜಯ ಮೃತ್ಯುಂಜಯ ಶ್ರೀಗಳು ವರ್ತನೆ ಸರಿ ಮಾಡಿಕೊಂಡಿಲ್ಲ ಎಂದು ಜಯ ಮೃತ್ಯುಂಜಯ ಶ್ರೀಗಳ ವಿರುದ್ಧ ನೀಲಕಂಠ ಅಸೂಟಿ ಕಿಡಿಕಾರಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!