Ad imageAd image

ಕಡಿಮೆ ವೆಚ್ಚದ ಮನೆ ನಿರ್ಮಾಣಕ್ಕೆ ತಂತ್ರಜ್ಞಾನ ಬಳಸಿಕೊಳ್ಳಿ: ಬಂಡೆಪ್ಪ ಕಾಶೆಂಪುರ

Bharath Vaibhav
ಕಡಿಮೆ ವೆಚ್ಚದ ಮನೆ ನಿರ್ಮಾಣಕ್ಕೆ ತಂತ್ರಜ್ಞಾನ ಬಳಸಿಕೊಳ್ಳಿ: ಬಂಡೆಪ್ಪ ಕಾಶೆಂಪುರ
WhatsApp Group Join Now
Telegram Group Join Now

——————————————————————————‘ಬಿಲ್ಡ್ ಟೆಕ್’ ವಸ್ತು ಪ್ರದರ್ಶನ ಆರಂಭ

ಬೀದರ್: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆ ನಿರ್ಮಿಸುವ ಕುರಿತು ಸಲಹೆ ನೀಡುವ ಮೂರು ದಿನಗಳ ‘ಬಿಲ್ಡ್ ಟೆಕ್-2025’ ವಸ್ತು ಪ್ರದರ್ಶನ ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಬಳಿಯ ಝೀರಾ ಫಂಕ್ಷನ್ ಹಾಲ್‍ನಲ್ಲಿ ಶುಕ್ರವಾರ ಆರಂಭಗೊಂಡಿತು.


ಮೊದಲ ದಿನ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗಾಗಲೇ ಮನೆ ನಿರ್ಮಿಸುತ್ತಿರುವವರು, ಹೊಸ ಮನೆ ನಿರ್ಮಾಣ, ನವೀಕರಣಕ್ಕೆ ಯೋಚಿಸುತ್ತಿರುವವರು, ಬಿಲ್ಡರ್, ಆರ್ಕಿಟೆಕ್ಟ್, ಸಿವಿಲ್ ಎಂಜಿನಿಯರ್ ಮತ್ತಿತರರು ಪ್ರದರ್ಶನಕ್ಕೆ ಭೇಟಿ ನೀಡಿ ಗೃಹ ನಿರ್ಮಾಣದ ನವೀನ ತಂತ್ರಜ್ಞಾನಗಳ ಮಾಹಿತಿ ಪಡೆದರು.
ಮನೆ ನಿರ್ಮಿಸಲು ಬೇಕಾಗುವ ಸಾಮಗ್ರಿಗಳ ದರ, ಬಾಳಿಕೆ ಅವಧಿ, ಗುಣಮಟ್ಟದ ಬಗ್ಗೆ ಕೇಳಿ ತಿಳಿದುಕೊಂಡರು.
ಪ್ರದರ್ಶನದಲ್ಲಿ ದೇಶದ ಬೇರೆ ಬೇರೆ ಭಾಗಗಳ ವಿವಿಧ ಕಂಪನಿಗಳ 70 ಅಂಗಡಿಗಳು ತೆರೆದುಕೊಂಡಿವೆ.
ಇವುಗಳಲ್ಲಿ ಸ್ಟೀಲ್, ಸಿಮೆಂಟ್, ಟೈಲ್ಸ್, ಕಿಟಕಿ, ಬಾಗಿಲು, ಎಲೆಕ್ಟ್ರಿಕಲ್, ಸೋಲಾರ್, ಇಂಟೆರಿಯರ್ ಆ್ಯಂಡ್ ಎಕ್ಸ್‍ಟೆರಿಯರ್, ಅಲ್ಯುಮಿನಿಯಂ ಸಾಮಗ್ರಿ, ಕೈಯಿಂದ ತಯಾರಿಸಿದ ಐಷಾರಾಮಿ ಸೋಫಾ, ಡೈನಿಂಗ್ ಹಾಲ್ ಸೇರಿ ವಿವಿಧ ಪೀಠೋಪಕರಣ, ದೇವರ ಕಂಚಿನ ಮೂರ್ತಿಗಳು, ವಾಟರ್ ಪ್ರೂಫಿಂಗ್ ಮೊದಲಾದವು ಸೇರಿವೆ.


ತಂತ್ರಜ್ಞಾನ ಬಳಸಿಕೊಳ್ಳಿ: ಪ್ರದರ್ಶನಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆ ನಿರ್ಮಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮನೆ ನಿರ್ಮಾಣ ಬಡವರ ಕನಸು ಆಗಿರುತ್ತದೆ. ಹೀಗಾಗಿ ಅವರ ಕನಸು ಸಾಕಾರಗೊಳಿಸಲು ವಿವಿಧ ಕಂಪನಿಗಳು ಕಡಿಮೆ ದರದಲ್ಲಿ ಕಟ್ಟಡ ಸಾಮಗ್ರಿ ಪೂರೈಸುವ ಯೋಜನೆ ರೂಪಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆಯ ಪೂರ್ವೋತ್ತರ ವಲಯದ ಮುಖ್ಯ ಎಂಜಿನಿಯರ್ ಶರಣಪ್ಪ ಸುಲಗುಂಟೆ ಮಾತನಾಡಿ, ಜನರ ಕೈಗೆಟಕುವ ವೆಚ್ಚದಲ್ಲಿ ಮನೆ ನಿರ್ಮಾಣ ಇಂದಿನ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಎಂಜಿನಿಯರ್‍ಗಳ ಕೌನ್ಸಿಲ್ ಸದಸ್ಯ ಮುರಳಿಧರ ಕರಲೆಕರ್ ಮಾತನಾಡಿ, ಬೀದರ್‍ನಲ್ಲಿ ವಿವಿಧೆಡೆಯ ಕಟ್ಟಡ ನಿರ್ಮಾಣ ಸಾಮಗ್ರಿಗಳ ಕಂಪನಿಗಳನ್ನು ಆಹ್ವಾನಿಸಿ, ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಇಂಡಿಯನ್ ಕಾಂಕ್ರೀಟ್ ಇನ್‍ಸ್ಟಿಟ್ಯೂಟ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಉತ್ಕøಷ್ಟ ಗುಣಮಟ್ಟದ ಮನೆ ನಿರ್ಮಾಣಕ್ಕೆ ಅನೇಕ ನವೀನ ತಂತ್ರಜ್ಞಾನಗಳು ಬಂದಿವೆ. ಮನೆ ಸಾಮಗ್ರಿಗಳ ಬಗ್ಗೆ ಅರಿತರೆ ಸುಂದರ ಮನೆ ನಿರ್ಮಿಸಬಹುದು. ಈ ದಿಸೆಯಲ್ಲಿ ಜನರಿಗೆ ಸಲಹೆ ನೀಡಲು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ರೆಡಾಯ್ ಬೀದರ್ ಅಧ್ಯಕ್ಷ ರವಿ ಮೂಲಗೆ ಮಾತನಾಡಿ, ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಪ್ರದರ್ಶನವನ್ನು ಜಿಲ್ಲೆಯ ಜನರ ಅನುಕೂಲಕ್ಕಾಗಿ ಬೀದರ್‍ನಲ್ಲಿ ಸಂಘಟಿಸಲಾಗಿದೆ. ಮನೆ ನಿರ್ಮಿಸ ಬಯಸುವವರು ಇದರ ಲಾಭ ಪಡೆಯಬೇಕು ಎಂದು ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ಯು.ಎಸ್. ಕಮ್ಯುನಿಕೇಷನ್ಸ್‍ನ ಉಮಾಪತಿ, ಕಲ್ಮೇಶ್ ತೊಟದ, ಕ್ರೆಡಾಯ್ ಬೀದರ್ ಕಾರ್ಯದರ್ಶಿ ಅನಿಲ್ ಖೇಣಿ, ರಾಜೋರಿ ಸ್ಟೀಲ್ ಕರ್ನಾಟಕ-ತೆಲಂಗಾಣ ಮಾರುಕಟ್ಟೆ ಮುಖ್ಯಸ್ಥ ಆದಿನಾಥ, ಬೀದರ್ ಜಿಲ್ಲಾ ವಿತರಕ ಸುಧೀರ್ ಅಗ್ರವಾಲ್, ಪ್ರದೀಪ್ ಕುಲಕರ್ಣಿ ಮತ್ತಿತರರು ಇದ್ದರು.
ಇಂಡಿಯನ್ ಕಾಂಕ್ರೀಟ್ ಇನ್‍ಸ್ಟಿಟ್ಯೂಟ್, ಕ್ರೆಡಾಯ್ ಬೀದರ್ ಹಾಗೂ ಯು.ಎಸ್. ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನ ಭಾನುವಾರದ ವರೆಗೆ ನಡೆಯಲಿದೆ.

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!