ಸಿರುಗುಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಹಿಳಾ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು, ಈ ದಿನ ಸಿರುಗುಪ್ಪ ತಾಲೂಕಿನ ಯೋಜನಾಧಿಕಾರಿ ಸುಧೀರ ಹಂಗಳೂರು ರವರು ಯೋಜನೆಯ ವಾಹನಕ್ಕೆ ನಗರದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಆಶಯದಂತೆ ನಗರ ಮತ್ತು ಗ್ರಾಮೀಣ ಭಾಗದ ಮಹಿಳೆಯರು ಸ್ವ-ಉದ್ಯೋಗದಲ್ಲಿ ಪ್ರಗತಿ ಹೊಂದಲು ಸ್ವ ಉದ್ಯೋಗ, ಕೃಷಿ, ಜೇನು ಸಾಕಾಣಿಕೆ, ಮನೆಯಲ್ಲಿದ್ದು ಮಾಡಬಹುದಾದ ಇನ್ನಿತರ ಕೆಲಸಗಳ ಬಗ್ಗೆ ಈಗಾಗಲೇ ಯೋಜನೆಯಿಂದ ತರಬೇತಿ ಪಡೆದುಕೊಂಡಿದ್ದಾರೆ.

ಪ್ರಗತಿ ಹೊಂದಿದ ಸದಸ್ಯರ ಯಶೋಗಾಥೆಯನ್ನು ಅಧ್ಯಯನ ನಡೆಸುವುದು ಅದರೊಂದಿಗೆ ಸ್ಥಳೀಯ ಸದಸ್ಯರು ಮಾಡಲಿಚ್ಚಿಸುವ ಕೆಲಸಗಳ ಬಗ್ಗೆ ಅಗತ್ಯ ತರಬೇತಿಗಳನ್ನು ಹಾಗೂ ಆಯಾ ಇಲಾಖೆಯ ಅಡಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಅಧ್ಯಯನ ಪ್ರತಿ ವರ್ಷ ನಡೆದಿದೆ. ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಶ್ರೀಮತಿ ಪ್ರಿಯಾ, ವಲಯದ ಮೇಲ್ವಿಚಾರಕಿ ಚಂದ್ರಕಲಾ, ಸೇವಾಪ್ರತಿನಿಧಿಗಳಾದ ಅನಿತಾ, ಲಿಂಗಮ್ಮ ಹಾಗೂ ಮಹಿಳಾ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ವರದಿ.ಶ್ರೀನಿವಾಸ ನಾಯ್ಕ




