—————ಖಡಕಲಾಟದಲ್ಲಿ ನವಗ್ರಹ ಸೋಸಾಯಿಟಿ ಪ್ರಥಮ ಶಾಖಾರಂಭ ವೇಳೆ ಉತ್ತಮ ಪಾಟೀಲ ಅಭಿಮತ
ನಿಪ್ಪಾಣಿ: ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾದರೆ ಮಿತ ಖರ್ಚು, ಪಾರದರ್ಶಕ, ರಾಜಕೀಯ ರಹಿತ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಸಾಧ್ಯವೆಂದು ನಿಪ್ಪಾಣಿ ಮತಕ್ಷೇತ್ರದ ಯುವ ನಾಯಕ ಸಹಕಾರರತ್ನ ಉತ್ತಮ ಪಾಟೀಲ ಅವರು ನಿಪ್ಪಾಣಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಶಮನೇ ವಾಡಿಯ ನವಗ್ರಹ ಮೈನಾರಿಟಿ ಕೋ ಆಪ ಸೊಸೈಟಿಯ ಪ್ರಥಮ ಶಾಖಾರಂಭ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳಿಗ್ಗೆ ಓಂಕಾರ್ ಉಪಾಧ್ಯೇ ಅವರಿಂದ ಲಕ್ಷ್ಮಿ ಸರಸ್ವತಿ ಪೂಜೆ ನಡೆಯಿತು. ತದನಂತರ ಸ್ವಸ್ತಿ ಶ್ರೀ ಜನಿಸೇನ ಭಟ್ಟಾರಕ, ಧರ್ಮಸೇನ ಭಟ್ಟಾರಕ ಹಾಗೂ ಶಿವಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಿಬ್ಬನ್ ಬಿಚ್ಚುವ ಮೂಲಕ ಶಾಖೆ ಉದ್ಘಾಟನೆ ಮಾಡಲಾಯಿತು. ಸತೀಶ್ ಪಾಟೀಲ್, ರಾಕೇಶ್ ಚಿಂಚನೇ, ಆರ್ ಬಿ ಖೋತ,ಸಂಜಯ ಚೌಗಲೇ, ಸಂಸ್ಥೆಯ ಅಧ್ಯಕ್ಷ ಭರತಕುಮಾರ ಖೋತ ಮಾತನಾಡಿ ಸಂಸ್ಥೆಯ ಸಾಂಪತ್ತಿಕ ಸ್ಥಿತಿ ವಿವರಿಸಿ, ಸಂಸ್ಥೆಯ ಮೊದಲ ಶಾಖೆ ಖಡಕಲಾಟದಲ್ಲಿ ಮೊದಲ ದಿನವೇ ದಾಖಲೆ 1ಕೋಟಿ 45ಲಕ್ಷ ರೂಪಾಯಿ ಠೇವು ಸಂಗ್ರಹಣೆಯಾಗಿರುದಾಗಿ ತಿಳಿಸಿದರು.
ವೇದಿಕೆಯಲ್ಲಿಯ ಗಣ್ಯರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ಸಮಾರಂಭ ದಲ್ಲಿ ನರಸಗೊಂಡ ಪಾಟೀಲ, ರಮೇಶ ವನಕುದ್ರೆ, ನಾಸಿರ್ ತಹಸೀಲ್ದಾರ್ ಸೇರಿದಂತೆ ಕಡಕ ಲಾಟ ಶಮನೇವಾಡಿ ಶಾಖೆಯ ಎಲ್ಲ ಸಂಚಾಲಕರು, ಸದಸ್ಯರು, ಬಾಹುಬಲಿ ಲಕ್ಕನ್ನವರ, ಸ್ವಾಗತಿಸಿ ದರು. ಪುಷ್ಪದಂತ ಜನಾಜ ವಂದಿಸಿದರು.
ವರದಿ: ಮಹಾವೀರ ಚಿಂಚಣೆ




