Ad imageAd image

ಸೇಡಂ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಪತ್ರಿಕಾ ದಿನಾಚರಣೆ

Bharath Vaibhav
ಸೇಡಂ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಪತ್ರಿಕಾ ದಿನಾಚರಣೆ
WhatsApp Group Join Now
Telegram Group Join Now

 —————————————————————–ಲಿಂ. ಬಿ. ಮಹದೇವಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಸೇಡಂ: ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಲಿ.ಬಿ.ಮಹಾದೇವಪ್ಪನವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಪತ್ರಿಕಾ ರಂಗ ಕವಲು ದಾರಿಯಲ್ಲಿದ್ದು, ಪತ್ರಕರ್ತರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ ಜೊತೆಗೆ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ ರಾಜ್ಯದ ಪತ್ರಕರ್ತರ ಜೊತೆಗಿದೆ ಎಂಬುದನ್ನು ಸಾಬೀತುಪಡಿಸಿದೆ.

ಪತ್ರಕರ್ತರ ವೇತನದ ಬಗ್ಗೆ ಕಾನೂನಾತ್ಮಕ ಯೋಜನೆ ರೂಪಿಸುವಲ್ಲಿ ಕೇಂದ್ರ ಮಟ್ಟದಲ್ಲಿ ಕೆಲಸವಾಗಬೇಕಿದೆ. ರಾಜ್ಯ ಸರ್ಕಾರದಿಂದ ಯಾವೆಲ್ಲಾ ಯೋಜನೆಗಳನ್ನು ಪತ್ರಕರ್ತರಿಗೆ ನೀಡಬೇಕೆನ್ನುವ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಲಿದೆ. ಇದರೊಂದಿಗೆ ಸೇಡಂ ಪತ್ರಿಕಾ ರಂಗ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ತದನಂತರ ದಿವ್ಯಸಾನಿದ್ಯ ವಹಿಸಿರುವ ಶ್ರೀ ಮಹಾಂತೇಶ್ವರ ಮಠ ತೊಟ್ನಳ್ಳಿ ಶ್ರೀಗಳಾದ ಷಡಕ್ಷರ ಬ್ರಹ್ಮ ಪೂಜ್ಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು ಮಾತನಾಡಿದರು.

ಪತ್ರಕರ್ತ ಲಿಂ.ಬಿ. ಮಹದೇವಪ್ಪ ಪ್ರಶಸ್ತಿ ಪುರಸ್ಕೃತರು ಟಿ. ವಿ. ಶಿವಾನಂದ ಮುಖ್ಯಸ್ಥರು ಪತ್ರಿಕೋದ್ಯಮ ವಿಭಾಗ ಶ್ರೀ ಶರಣಬಸವೇಶ್ವರ ಮಹಾವಿದ್ಯಾಲಯ ಕಲಬುರ್ಗಿ, ಸುಭಾಷ್ ಬಣಗಾರ ಸ್ಥಾನಿಕ ಸಂಪಾದಕರು ಸಂಯುಕ್ತ ಕರ್ನಾಟಕ ಕಲಬುರಗಿ ಮತ್ತು ದೇವಯ್ಯ ಗುತ್ತೇದಾರ್ ಸ್ಥಾನಿಕ ಸಂಪಾದಕರು ವಿಜಯ ಕರ್ನಾಟಕ ಕಲಬುರಗಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ, ತಾಲೂಕ ಅಧ್ಯಕ್ಷರಾದ ಶರಣು ಮಹಾಗಾಂವ, ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!