ಬಾಗಲಕೋಟೆ : ಜಯಮೃತ್ಯುಂಜಯ ಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕ ಮಾತಾಡಿದ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ‘ಸೃಷ್ಟಿಕರ್ತ ಕೂಡಲಸಂಗಮನ ಆಶೀರ್ವಾದ, ಬಸವಣ್ಣನ ಆಶೀರ್ವಾದ, ಸಮಾಜದ ಜನರ ಪ್ರಾರ್ಥನೆಯಿಂದ ಆರಾಮಾಗಿದ್ದೇನೆ’ ಎಂದರು.
‘ಕಳೆದ ನಾಲ್ಕು ದಿನಗಳಿಂದ ಆದ ಬೆಳವಣಿಗೆಗಳಿಂದ ಅಸಮಾಧಾನವಾಗಿತ್ತು. ನಿನ್ನೆ ಬೆಳಿಗ್ಗೆ ವಾಕಿಂಗ್ ಮಾಡುವಾಗ ಎದೆನೋವು, ವಾಂತಿ ಕಾಣಿಸಿಕೊಂಡಿತ್ತು. ಆಗ ಭಕ್ತರು ವೈದ್ಯರ ಸಂಪರ್ಕ ಮಾಡಿದಾಗ. ಆಸ್ಪತ್ರೆಗೆ ಬರಲು ಹೇಳಿದ್ರು. ನಿನ್ನೆಯಿಂದ ವೈದ್ಯರು ಹಾಗೂ ಸಿಬ್ಬಂದಿ ಮಾಡಿದ ಆರೈಕೆ ಮಾಡಿದ್ದಾರೆ. ಭಕ್ತರ ಪ್ರಾರ್ಥನೆಯಿಂದಾಗಿ ಗುಣಮುಖನಾಗಿದ್ದೇನೆ’ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಕಾಶಪ್ಪನವರ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಸಭೆ ಬೆನ್ನಲ್ಲೆ, ಮಾಜಿ ಸಚಿವ ಸಿ.ಸಿ ಪಾಟೀಲ್ ಮತ್ತು ಬಸವಜಯ ಮೃತ್ಯುಂಜಯ ಸ್ವಾಮೀಜಿ ಚರ್ಚೆ ನಡೆಸಿದ್ದಾರೆ.
ಉಳಿದ ಭಕ್ತರನ್ನೆಲ್ಲಾ ಹೊರಗೆ ಕಳಿಸಿ ಸ್ವಾಮೀಜಿ ಜೊತೆ ಸಿ.ಸಿ.ಪಾಟೀಲ. ಸ್ವಾಮೀಜಿ ಆರೋಗ್ಯ ವಿಚಾರಿಸಲು ಆಗಮಿಸಿರೋ ಮಾಜಿ ಸಚಿವ ಸಿ.ಸಿ.ಪಾಟೀಲ್ ಚರ್ಚೆ ಮಾಡಿದ್ದಾರೆ.
ನಿನ್ನೆ ಟ್ರಸ್ಟ್ ಸಭೆ ಮಾಡಿದ್ದ ಕಾಶಪ್ಪನವರ್, ಸ್ವಾಮೀಜಿ ಬದಲಾವಣೆ ಮಾಡುವ ನಿರ್ಧಾರ ಹೊರ ಹಾಕಿದ್ದರು. ಅತ್ತ ಟ್ರಸ್ಟ್ ಸಭೆ ಬೆನ್ನಲ್ಲೇ ಇತ್ತ ಸ್ವಾಮೀಜಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದರು.




