Ad imageAd image

ಸಮವಸ್ತ್ರದಲ್ಲೇ ನೇಣು ಬಿಗಿದುಕೊಂಡು ಪಿಎಸ್‍ಐ ಆತ್ಮಹತ್ಯೆ 

Bharath Vaibhav
ಸಮವಸ್ತ್ರದಲ್ಲೇ ನೇಣು ಬಿಗಿದುಕೊಂಡು ಪಿಎಸ್‍ಐ ಆತ್ಮಹತ್ಯೆ 
WhatsApp Group Join Now
Telegram Group Join Now

ದಕ್ಷಿಣ ಕನ್ನಡ: ನೇಣು ಬಿಗಿದುಕೊಂಡು ಪಿಎಸ್​​​​​ಐಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳದಲ್ಲಿ ಇಂದು (ಜು.20) ನಡೆದಿದೆ.

ಸೂಸೈಡ್​​ ಮಾಡಿಕೊಂಡಿರುವ ಪಿಎಸ್​​​​ಐ ಅನ್ನು ಕೀರಪ್ಪ ಟಕಾಂಬ್ಳೆ (54) ಎಂದು ಗುರುತಿಸಲಾಗಿದೆ. ಸಮವಸ್ತ್ರದಲ್ಲೇ ಅವರು ನೇಣಿಗೆ ಶರಣಾಗಿದ್ದಾರೆಂದು ಕಾರಣ ಮಾತ್ರ ಸದ್ಯಕ್ಕೆ ನಿಗೂಢವಾಗಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರಾದ ಘಟಕಾಂಬ್ಳೆಯವರು ಶಿರಸಿ ಮಾರುಕಟ್ಟೆಯ ಠಾಣೆಯ ಎಎಸ್​​​ಐಯಾಗಿದ್ದರು. ಇತ್ತೀಚೆಗಷ್ಟೇ ಬಡ್ತಿ ಪಡೆದು ಪಿಎಸ್​​​​​​ಐ ಆಗಿದ್ದರು.

ಕಳೆದ ಐದು ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದರು. ಬಂಟ್ವಾಳದ ತನಿಖಾ ವಿಭಾಗದಲ್ಲಿ ಪಿಎಸ್​​​​​​​​​​ಐ ಆಗಿ ಮುಂಬಡ್ತಿ ಪಡೆದಿದ್ದು, ಇದೀಗ ಬಂಟ್ವಾಳ ನಗರದ ಬಾಡಿಗೆ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!