ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಿಂಚೋಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಲಬುರಗಿ ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ,ಹುಟ್ಟು ಹಬ್ಬದ ಅಂಗವಾಗಿ ಚಿಂಚೋಳಿ ತಾಲೂಕು ವೀರಶೈವ ಸಮಾಜದ ವತಿಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಚಿಂಚೋಳಿ ಬಡಿದರ್ಗಾ ಸಜ್ಜಾದೆ ನಶೀನ್ ಸೈಯದ್ ಅಕ್ಬರ್ ಹುಸೈನಿ, ಮತ್ತು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಮಹಮ್ಮದ ಗಫರ್,ರವರು ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ವೀರಶೈವ ಸಮಾಜದ ಗೌರವಾಧ್ಯಕ್ಷರಾದ ರಮೇಶ್ ಪಡಶೆಟ್ಟಿ,ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಪ್ರದೀಪ್ ದೇಶಮುಖ, ರೇವಣಸಿದ್ದಪ್ಪ ದಾದಾಪುರ, ವಿಜಯ್ ಕುಮಾರ್ ಬಳಕೇರಿ, ಚಂದ್ರಶೇಖರ್ ಪಾರ, ಜಗದೀಶ್ ಸಜ್ಜನ್ ಕಲ್ಲೂರ್, ಸಮಾಜದ ಯುವ ಮುಖಂಡರಾದ ಪವನ ಪಾಟೀಲ ದೇಗಲಮಡಿ, ದಯಾನಂದ ಹಿತ್ತಲ, ಈಶ್ವರಪ್ಪ ಕಲಶೆಟ್ಟಿ ಗರಗಪಳ್ಳಿ, ಸುನೀಲ್ ಕಾಳಗಿ, ಮಲ್ಲಿನಾಥ್ ಮೇಲಗಿರಿ, ಚೇತನ್ ಹುಡದಳಿ, ರೇವಣಸಿದ್ದಪ್ಪ ತಡಕಲ್, ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.
ವರದಿ: ಸುನಿಲ್ ಸಲಗರ




